ʼಹೆದ್ದಾರಿʼ ಗಾಗಿ ಮನೆ ಮಾರಲು ನಿರಾಕರಣೆ; ನಿವಾಸದ ಸುತ್ತಲೂ ರಸ್ತೆ ನಿರ್ಮಾಣ | Watch Video

ಚೀನಾದಲ್ಲಿ ಒಬ್ಬ ವೃದ್ದ, ಹೆದ್ದಾರಿ ನಿರ್ಮಾಣಕ್ಕಾಗಿ ತನ್ನ ಮನೆಯನ್ನು ಮಾರಲು ನಿರಾಕರಿಸಿದ ನಂತರ, ಈಗ ಅವರ ಮನೆಯ ಸುತ್ತಲೂ ಹೆದ್ದಾರಿ ನಿರ್ಮಾಣವಾಗಿದೆ.

ಜಿನ್ಕ್ಸಿಯಲ್ಲಿರುವ ಹುವಾಂಗ್ ಪಿಂಗ್ ಅವರ ಎರಡು ಮಹಡಿಯ ಮನೆ ಈಗ ನಿರ್ಮಾಣ ಸ್ಥಳದಿಂದ ಸುತ್ತುವರೆದಿದೆ ಮತ್ತು ನಿರಂತರವಾಗಿ ಧೂಳು ಮತ್ತು ಶಬ್ದದಿಂದಾಗಿ ಅವರು ಈ ಹಿಂದೆ ಸರ್ಕಾರ ನೀಡಲು ಮುಂದಾಗಿದ್ದ £180,000 (ಸುಮಾರು ₹2 ಕೋಟಿ) ಪರಿಹಾರವನ್ನು ತಿರಸ್ಕರಿಸಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಎರಡು ಮಹಡಿಯ ಮನೆಯು ದೊಡ್ಡ ಹೆದ್ದಾರಿಯಿಂದ ಸುತ್ತುವರೆದಿರುವುದನ್ನು ಕಾಣಬಹುದು, ಅದರ ಛಾವಣಿಯು ಹೆದ್ದಾರಿಯ ಎರಡು ಲೇನ್‌ಗಳೊಂದಿಗೆ ಬಹುತೇಕ ಸಮತಟ್ಟಾಗಿದೆ.

ತನ್ನ 11 ವರ್ಷದ ಮೊಮ್ಮಗನೊಂದಿಗೆ ವಾಸಿಸುತ್ತಿರುವ ಹುವಾಂಗ್, ಸರ್ಕಾರ ಕೊಡ ಮಾಡಿದ್ದ ಪರಿಹಾರಕ್ಕೆ ಅತೃಪ್ತಿ ಹೊಂದಿದ್ದ ಕಾರಣ ಸ್ಥಳಾಂತರವಾಗಲು ನಿರಾಕರಿಸಿದ್ದರು. ದೀರ್ಘಕಾಲದ ಮಾತುಕತೆಗಳ ನಂತರ, ಅಧಿಕಾರಿಗಳು ಅವರ ಮನೆಯ ಸುತ್ತಲೂ ನಿರ್ಮಾಣವನ್ನು ಪ್ರಾರಂಭಿಸಿದರು.

ಈಗ ವೃದ್ಧನ ಮನೆ ಜನಪ್ರಿಯ ಆಕರ್ಷಣೆಯನ್ನಾಗಿ ಮಾಡಿದೆ. ನಿವಾಸಿಗಳು ಅಲ್ಲಿಗೆ ಭೇಟಿ ನೀಡಿ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ, ಹುವಾಂಗ್ ಅವರನ್ನು ಚೀನಾದಲ್ಲಿ “ಬಲವಾದ ಮನೆ ಮಾಲೀಕ” ಎಂದು ಕರೆಯುತ್ತಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read