BIG NEWS: ಕೇಂದ್ರ ಬಜೆಟ್ ಹಿನ್ನೆಲೆ ನಾಳೆಯೂ ಷೇರುಪೇಟೆ ಓಪನ್

ಮುಂಬೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಮಂಡಿಸಲಿದ್ದಾರೆ.

ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ನಾಳೆಯೂ ಷೇರುಪೇಟೆ ಕಾರ್ಯನಿರ್ವಹಿಸಲಿದೆ. ಫೆಬ್ರವರಿ 1ರಂದೇ ಬಜೆಟ್ ಮಂಡಿಸುವ ನಿಯಮ ಜಾರಿಯಾದ ನಂತರ ಶನಿವಾರ ಮಂಡನೆ ಆಗುತ್ತಿರುವ ಎರಡನೇ ಬಜೆಟ್ ಇದಾಗಿದೆ.

ಸಾಮಾನ್ಯವಾಗಿ ಷೇರುಪೇಟೆಗೆಶನಿವಾರ ರಜೆ ಇರುವುದರಿಂದ ಕಾರ್ಯನಿರ್ವಹಿಸುವುದಿಲ್ಲ. ಆದರೆ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ನಾಳೆಯೂ ಷೇರುಪೇಟೆ ಕಾರ್ಯನಿರ್ವಹಿಸಲಿದೆ. 2020 ರಲ್ಲಿಯೂ ಇದೇ ರೀತಿ ಶನಿವಾರ ಬಜೆಟ್ ಮಂಡನೆಯಾಗಿದ್ದು, ಷೇರುಪೇಟೆ ಕಾರ್ಯನಿರ್ವಹಿಸಿತ್ತು.

ಈ ಬಾರಿ ಬಜೆಟ್ ನಲ್ಲಿ ದುರ್ಬಲವಾಗಿರುವ ಆರ್ಥಿಕ ಬೆಳವಣಿಗೆಗೆ ಬಲ ತುಂಬುವ ಮತ್ತು ಬೆಲೆ ಏರಿಕೆ, ಸ್ಥಿರ ಆದಾಯದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಮಧ್ಯಮ ವರ್ಗಕ್ಕೆ ಅನುಕೂಲವಾಗುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read