BIG UPDATE : ಇನ್ನೂ ಸಿಕ್ಕಿಲ್ಲ ‘ರೇಣುಕಾಸ್ವಾಮಿ’ ಮೊಬೈಲ್ ; ನಕಲಿ ಸಿಮ್ ಖರೀದಿಸಿದ ಪೊಲೀಸರು..!

ಬೆಂಗಳೂರು : ನಟ ದರ್ಶನ್ & ಗ್ಯಾಂಗ್ ನಿಂದ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಮೊಬೈಲ್ ಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸತತ ಕಾರ್ಯಾಚರಣೆ ನಡೆಸಿ ವಿಫಲವಾಗಿದೆ.

ಮೊಬೈಲ್ ಸಿಗದ ಹಿನ್ನೆಲೆ ಪೊಲೀಸರು ರೇಣುಕಾಸ್ವಾಮಿಯ ನಕಲಿ ಸಿಮ್ ಖರೀದಿಸಿ ತನಿಖೆ ಮುಂದುವರೆಸುತ್ತಿದ್ದಾರೆ. ಮೃತ ರೇಣುಕಾ ಸ್ವಾಮಿ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿರುವ ಪೊಲೀಸರು ಮೊಬೈಲ್ ಮಾಹಿತಿಯನ್ನು ರೀ ಆಕ್ಸೆಸ್ ಮಾಡಿದ್ದಾರೆ ಎನ್ನಲಾಗಿದೆ .

ಇನ್ನೂ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಹಾಗೂ ಅವರ ಸಹಚರರ ಮೊಬೈಲ್ ಪರಿಶೀಲನೆಗೆ ಕೋರ್ಟ್ ಅನುಮತಿ ನೀಡಿತ್ತು,

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ 2 ಆರೋಪಿ ದರ್ಶನ್, ಎ 9 ಆರೋಪಿ ಧನರಾಜ್, ಎ 10 ಆರೋಪಿ ವಿನಯ್ ಹಾಗೂ ಎ 14 ಆರೋಪಿ ಪ್ರದೋಷ್ ಮೊಬೈಲ್ ಪರಿಶೀಲನೆಗೆ ಅನುಮತಿ ನೀಡುವಂತೆ ಪೊಲೀಸರು ಕೋರ್ಟ್ ಗೆ ಮನವಿ ಮಾಡಿದ್ದರು.ಮನವಿ ಆಲಿಸಿದ ಕೋರ್ಟ್ ನಾಲ್ವರು ಆರೋಪಿಗಳ ಮೊಬೈಲ್ ಪರಿಶೀಲನೆಗೆ ಅನುಮತಿ ನೀಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read