ಸ್ಟೀಲ್‌ ಬರ್ಡ್‌ನಿಂದ ಬಂತು ಕೈಗೆಟುಕುವ ದರದಲ್ಲಿ ಹೊಸ ಹೆಲ್ಮೆಟ್

ಬೈಕ್ ಸವಾರಿಯ ಸುರಕ್ಷತಾ ಸಾಧನಗಳ ಉತ್ಪಾದಕ ಸ್ಟೀಲ್‌ಬರ್ಡ್ ತನ್ನ ಹೊಸ ಹೆಲ್ಮೆಟ್ SBA 19 R2K ಫ್ಲಿಪ್ ಅಪ್ ಹೆಲ್ಮೆಟ್ ಬಿಡುಗಡೆ ಮಾಡಿದೆ. ಬೇಸಿಗೆಯ ಬೇಗೆಯಲ್ಲಿ ಬೈಕ್ ಸವಾರರ ತಲೆಗೆ ಹೆಚ್ಚಿನ ಗಾಳಿಯ ಪೂರೈಕೆಯಾಗಲು ಅನುವಾಗುವಂತೆ ಈ ಹೆಲ್ಮೆಟ್‌ನಲ್ಲಿ ಸುಧಾರಿತ ವೆಂಟಿಲೇಷನ್ ವ್ಯವಸ್ಥೆ ಮಾಡಲಾಗಿದೆ.

ಬಿಐಎಸ್ ಪ್ರಮಾಣೀಕೃತವಾದ ಈ ಹೆಲ್ಮೆಟ್ ಬೆಲೆಯನ್ನು 1,199‌ ರೂ. ಎಂದು ನಿಗದಿ ಮಾಡಲಾಗಿದೆ. ಥರ್ಮೋಪ್ಲಾಸ್ಟಿಕ್ ಕವಚದೊಂದಿಗೆ ಈ ಹೆಲ್ಮೆಟ್‌ ಸಂಭವನೀಯ ಆಘಾತಗಳಿಂದ ಹೆಚ್ಚುವರಿ ಸುರಕ್ಷತೆ ನೀಡುತ್ತದೆ. ಹೆಲ್ಮೆಟ್‌ನ ಒಳಭಾಗವನ್ನು ಬದಲಿಸಬಹುದಾಗಿದೆ. ಹೆಲ್ಮೆಟ್‌ನ ವೈಸರ್‌ ಅನ್ನು ಸ್ಕ್ರಾಚ್‌‌ ಆಗದಂತೆ ಉತ್ಪಾದಿಸಲಾಗಿದೆ.

ಸವಾರರ ತಲೆಗಳ ಗಾತ್ರಕ್ಕನುಗುಣವಾಗಿ 580 ಎಂಎಂ, 600ಎಂಎಂ ಹಾಗೂ 620 ಎಂಎಂಗಳಲ್ಲಿ ಲಭ್ಯವಿರಲಿರುವ ಈ ಹೆಲ್ಮೆಟ್‌ಗಳನ್ನು ಸರಳವಾಗಿ ಹಾಕಿ ತೆಗೆಯಲು ರಿಲೀಸ್ ಬಕಲ್‌ಗಳನ್ನು ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read