ಬೆಂಗಳೂರು: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು, 15 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಿನ್ನೆಯಷ್ಟೇ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಇಂದು 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದೆ.
ಎಂ ಚಂದ್ರಶೇಖರ್ ಅವರನ್ನು ಎಡಿಜಿಪಿ ಇಂಡರ್ನಲ್ ಸೆಕ್ಯೂರಿಟಿ, ವಿಪುಲ್ ಕುಮಾರ್ ಅವರನ್ನು ಬೆಂಗಳೂರು ಈಸ್ಟ್ ವಿಭಾಗದ ಎಸಿಪಿಯಾಗಿ. ಜೆ ಅರುಣ್ ಚಕ್ರವರ್ತಿ ಅವರನ್ನು ಎಜಿಜಿಪಿ ಡೈರೆಕ್ಟರೇಟ್ ಆಪ್ ಸಿವಿಲ್ ರೈಟ್ಸ್ ಎನ್ಪೋರ್ಸ್ ಮೆಂಟ್ ಆಗಿ ನೇಮಿಸಿದೆ. ಮನೀಷ್ ಕರ್ಬೀಕರ್ ಅವರನ್ನು ಎಕಾನಮಿಕಲ್ ಎಫೆನ್ಸಸ್, ಕ್ರಿಮಿನಲ್ ಇನ್ವಿಸ್ಟಿಗೇಷನ್ ಡಿಪಾರ್ಟ್ ಮೆಂಟ್ ನ ಎಡಿಜಿಪಿಯಾಗಿ ನೇಮಿಸಿದೆ. ಸಂದೀಪ್ ಪಾಟೀಲ್ ಅವರನ್ನು ಕೆ ಎಸ್ ಆರ್ ಪಿಯ ಐಜಿಪಿಯಾಗಿ, ಡಾ.ಎಂ.ಬಿ ಬೋರಲಿಂಗಯ್ಯ ಅವರನ್ನು ಸೌಥ್ರೆನ್ ರೇಂಜ್ ಮೈಸೂರು ಐಜಿಪಿಯಾಗಿ ವರ್ಗಾವಣೆ ಮಾಡಿದೆ.
TAGGED:Ips officers transfer