ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಈ ಕೆಳಕಂಡ ಆಡಳಿತಾತ್ಮಕ/ವೈದ್ಯರ ಹುದ್ದೆಗಳಿಗೆ ಆಸಕ್ತ ಅಧಿಕಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು.
- ಜಿಲ್ಲಾ/ಪ್ರದೇಶಿಕ ತರಬೇತಿ ಸಂಸ್ಥೆಗಳ ಪ್ರಾಂಶುಪಾಲರು.
- ಜಿಲ್ಲಾ ಶಸ್ತ್ರಚಿಕಿತ್ಸಕರು.
- ಉಪ ನಿರ್ದೇಶಕರು.
- ಪ್ರಮುಖ ಆಸ್ಪತ್ರೆಗಳ ಸೂಪರಿಂಟೆಂಡೆಂಟ್ಗಳು.
- ಜಿಲ್ಲಾ ಮಟ್ಟದ ಕಾರ್ಯಕ್ರಮಾಧಿಕಾರಿಗಳು.
ಅರ್ಜಿ ಸಲ್ಲಿಸುವ ವೈದ್ಯರು ಅಂತಹ ಹುದ್ದೆಗೆ ಉಲ್ಲೇಖ(1) ರಿಂದ (3)ರವರಗಿನ ಆದೇಶಗಳಲ್ಲಿ ಅಗತ್ಯಪಡಿಸಲಾದ ಮಾನದಂಡವನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಅದರಂತೆ ಹುದ್ದೆಗಳಿಗೆ ನಿಗಧಿಪಡಿಸಿರುವ ಕನಿಷ್ಠ ಮಾನದಂಡ ಪೂರೈಸಿ ಅರ್ಹರಿರುವ ವೈದ್ಯರು ತಾವು ಇಚ್ಚಿಸುವ ಹುದ್ದೆಯ ವಿವರ ಹಾಗೂ ದಾಖಲಾತಿಗಳನ್ನು ಅಯಾ ಹುದ್ದೆಗೆ ಅನ್ವಯವಾಗುವಂತೆ (ಮೇಲೆ ವಿವರಿಸಿರುವಂತೆ) ಅನುಬಂಧ-1 ರಂತೆ ಭರ್ತಿ ಮಾಡಿ 15 ದಿನಗಳಲ್ಲಿ ಆಯುಕ್ತಾಲಯಕ್ಕೆ ಸಲ್ಲಿಸಲು ಸೂಚಿಸಿದೆ.





 
			 
		 
		 
		 
		 Loading ...
 Loading ... 
		 
		 
		