ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಪ್ರಾರಂಭಿಸಿ, ನಿಬ್ಬೆರಗಾಗಿಸುತ್ತೆ ಕೇವಲ 20 ನಿಮಿಷಗಳ ಈ ದಿನಚರಿ…..!

ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಬೇಕು ಅಂತಾ ಮನೆಯಲ್ಲಿ ಹಿರಿಯರು ಹೇಳೋದನ್ನು ನೀವು ಸಹ ಕೇಳಿರಬಹುದು. ಇಂದಿನ ಯುಗದಲ್ಲಿ ಚಪ್ಪಲಿ, ಬೂಟುಗಳಿಲ್ಲದೆ ಯಾರೂ ಹೊರಗೆ ಕಾಲಿಡುವುದಿಲ್ಲ. ಹಾಗಾಗಿ ಬರಿಗಾಲಿನಲ್ಲಿ ನಡೆಯುವ ಟ್ರೆಂಡ್ ಬಹುತೇಕ ಮುಗಿದಿದೆ. ಅನೇಕ ಆರೋಗ್ಯ ತಜ್ಞರು ಸಹ ಪ್ರತಿದಿನ ಬೆಳಗ್ಗೆ ಕನಿಷ್ಠ 20 ನಿಮಿಷಗಳ ಕಾಲ ಒದ್ದೆಯಾದ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಬೇಕು ಎಂದು ಸಲಹೆ ನೀಡುತ್ತಾರೆ. ಇದರಿಂದ ನಮ್ಮ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ಅಚ್ಚರಿ ಮೂಡಿಸುವಂತಿವೆ.

ಕಣ್ಣುಗಳಿಗೆ ಪ್ರಯೋಜನ: ಬೆಳಗ್ಗೆ ಎದ್ದು ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ಅದು ನಿಮ್ಮ ಪಾದಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ವಾಸ್ತವವಾಗಿ ನಮ್ಮ ದೇಹದ ಅನೇಕ ಭಾಗಗಳ ಒತ್ತಡದ ಬಿಂದುವು ಪಾದಗಳಲ್ಲಿರುತ್ತದೆ. ಇದರಲ್ಲಿ ಕಣ್ಣುಗಳೂ ಸೇರಿಕೊಂಡಿವೆ, ಸರಿಯಾದ ಬಿಂದುವಿನ ಮೇಲೆ ಒತ್ತಡ ಬಿದ್ದಾಗ ನಮ್ಮ ದೃಷ್ಟಿಶಕ್ತಿ ಹೆಚ್ಚಾಗುತ್ತದೆ.

ಅಲರ್ಜಿಗೆ ಚಿಕಿತ್ಸೆ; ಮುಂಜಾನೆ ಇಬ್ಬನಿ ಬಿದ್ದ ಹುಲ್ಲಿನ ಮೇಲೆ ನಡೆಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಮಗೆ ಹಸಿರು ಚಿಕಿತ್ಸೆಯನ್ನು ನೀಡುತ್ತದೆ. ಇದರಿಂದಾಗಿ ಪಾದದ ಕೆಳಗಿರುವ ಮೃದು ಕೋಶಗಳಿಗೆ ಸಂಬಂಧಿಸಿದ ನರಗಳು ಕ್ರಿಯಾಶೀಲವಾಗುತ್ತವೆ ಮತ್ತು ಮೆದುಳಿಗೆ ಸಂಕೇತವನ್ನು ರವಾನಿಸುತ್ತವೆ. ಅಲರ್ಜಿಯಂತಹ ಸಮಸ್ಯೆ ಕೂಡ ದೂರವಾಗುತ್ತದೆ.

ಕಾಲುಗಳಿಗೆ ವಿಶ್ರಾಂತಿ; ಒದ್ದೆಯಾದ ಹುಲ್ಲಿನ ಮೇಲೆ ಬರಿಗಾಲಲ್ಲಿ ನಡೆದಾಗ ಒಳ್ಳೆಯ ಮಸಾಜ್‌ ಆಗುತ್ತದೆ. ಕಾಲುಗಳ ಸ್ನಾಯುಗಳು ಸಾಕಷ್ಟು ವಿಶ್ರಾಂತಿ ಪಡೆಯುತ್ತವೆ. ಇದರಿಂದಾಗಿ ಸೌಮ್ಯವಾದ ನೋವು ಕಡಿಮೆಯಾಗುತ್ತದೆ.

ಉದ್ವೇಗದಿಂದ ಪರಿಹಾರ; ಬೆಳಗ್ಗೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ ಮತ್ತು ಟೆನ್ಶನ್ ಶಮನವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read