ಹೊಸಪೇಟೆ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ ಒಂದು ಸ್ಕೂಟಿ, ಲ್ಯಾಪ್ಟಾಪ್ ಹಾಗೂ ನಗದು ಬಹುಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿತರಿಸಿದ್ದಾರೆ.
ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನಗದು, ಸ್ಕೂಟಿ, ಲ್ಯಾಪ್ಟಾಪ್ ವಿತರಿಸಿದ ಸಚಿವರು ಮಾತನಾಡಿ, ಯಶವಂತ್ 624 ಅಂಕ ಗಳಿಸಿದ್ದು, ಕೊಟ್ಟ ಮಾತಿನಂತೆ ಒಂದು ಲಕ್ಷ ರೂ. ಬಹುಮಾನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ನಿಹಾರ್ 622 ಅಂಕ, ಲಕ್ಷ್ಮಿ, ಅಭಿಷೇಕ್, ಹೇಮಂತ್, ಉಮೇಶ್ ತಲಾ 621 ಅಂಕ ಗಳಿಸಿದ್ದು, ಎಲ್ಲರಿಗೂ ತಲಾ 50 ಸಾವಿರ ರೂ. ನೀಡಲಾಗಿದೆ. ಜೊತೆಗೆ ಎಲ್ಲರಿಗೂ ಸ್ಕೂಟಿ, ಲ್ಯಾಪ್ಟಾಪ್ ನೀಡಲಾಗಿದ್ದು, ಮಕ್ಕಳ ಓದಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಸ್ಕೂಟಿ ನೀಡಲಾಗಿದೆ. ಪಿಯುಸಿಯಲ್ಲಿ ಇನ್ನಷ್ಟು ಸಾಧನೆ ಮಾಡಿ ನಿಮ್ಮ ಕನಸು ಈಡೇರಿಸಿಕೊಳ್ಳಿ ಎಂದು ಶುಭ ಹಾರೈಸಿದ ಸಚಿವರು, ಮಕ್ಕಳು ವಯಸ್ಕರಾಗಿ ಲೈಸೆನ್ಸ್ ಪಡೆಯುವವರೆಗೆ ಸ್ಕೂಟಿಯನ್ನು ತಂದೆ, ತಾಯಿ ಚಲಾಯಿಸಬೇಕು ಎಂದು ತಿಳಿಸಿದ್ದಾರೆ.
Honored six students from Vijayanagar district who topped the SSLC examination with a two-wheeler each and gave a cash prize of Rs.50,000 to each as a token of appreciation pic.twitter.com/HG1ER2a8Vl
— B Z Zameer Ahmed Khan (@BZZameerAhmedK) May 13, 2025