ಜಿರಳೆ ಕಾಟದಿಂದ ಮುಕ್ತಿ ಹೊಂದಲು ಇದನ್ನು ಸಿಂಪಡಿಸಿ

ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಜಿರಳೆ, ನೊಣ, ಕೀಟಗಳ ಸಮಸ್ಯೆ ಕಾಡುತ್ತದೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಸಿಗುತ್ತದೆ. ಆದರೆ ಅದರಿಂದ ನಮ್ಮ ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಬಳಸಿ ಇವುಗಳನ್ನು ಓಡಿಸಿ.

*ಪುದೀನಾ ಸಹಾಯದಿಂದ ಜಿರಳೆ, ನೊಣ, ಕೀಟಗಳನ್ನು ಓಡಿಸಬಹುದು. ಹಾಗಾಗಿ ಪಾತ್ರೆಯಲ್ಲಿ ½ ಗ್ಲಾಸ್ ನೀರನ್ನು ತೆಗೆದುಕೊಂಡು ಅದರಲ್ಲಿ ಪುದೀನಾ ರಸವನ್ನು ಮಿಕ್ಸ್ ಮಾಡಿ ಮನೆಯ ಮೂಲೆ ಮೂಲೆಗೂ ಸಿಂಪಡಿಸಿ.

* ಕಹಿ ವಸ್ತುಗಳೆಂದರೆ ಜೀರಳೆ, ನೊಣಗಳಿಗೆ ಆಗುವುದಿಲ್ಲ. ಹಾಗಾಗಿ ಬೇವಿನ ರಸವನ್ನು ಸೀಮೆ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಮನೆಯಲ್ಲಿ ಸಿಂಪಡಿಸಿದರೆ ಅದರ ವಾಸನೆಗೆ ಓಡಿ ಹೋಗುತ್ತವೆ.

* ಜಿರಳೆ, ನೊಣದ ಕಾಟದಿಂದ ಮುಕ್ತಿ ಹೊಂದಲು ಬೆಳ್ಳುಳ್ಳಿ, ಈರುಳ್ಳಿ, ಕರಿಮೆಣಸನ್ನು ಸೇರಿಸಿ ಪೇಸ್ಟ್ ತಯಾರಿಸಿ ಅದನ್ನು ನೀರಿನಲ್ಲಿ ಬೆರೆಸಿ ಮನೆಯ ಎಲ್ಲಾ ಭಾಗಗಳಿಗೂ ಸಿಂಪಡಿಸಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read