ಪಂದ್ಯದ ವೇಳೆಯಲ್ಲೇ ಘೋರ ದುರಂತ: ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು

ಮುಂಬೈ: ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಪಕ್ಕದ ಪಿಚ್‌ನಿಂದ ಹಾರಿ ಬಂದ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದಾರೆ.

ಮಾಟುಂಗಾದ ದಾಡ್ಕರ್ ಮೈದಾನದಲ್ಲಿ ಘಟನೆ ನಡೆದಿದೆ. ಎರಡೂ ಪಂದ್ಯಗಳನ್ನು 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕಚ್ಚಿ ವೀಸಾ ಓಸ್ವಾಲ್ ವಿಕಾಸ್ ಲೆಜೆಂಡ್ ಕಪ್ T20 ಪಂದ್ಯಾವಳಿಗಾಗಿ ಆಡಲಾಗುತ್ತಿದ್ದ ವೇಳೆ ದುರಂತ ನಡೆದಿದೆ.

ಪಕ್ಕದ ದಾದರ್ ಪಾರ್ಸಿ ಕಾಲೋನಿ ಸ್ಪೋರ್ಟಿಂಗ್ ಕ್ಲಬ್ ಮೈದಾನದಲ್ಲಿ ಜಯೇಶ್ ಸಾವಾಲಾ ಬ್ಯಾಟ್ಸ್‌ ಮನ್‌ ಗೆ ಬೆನ್ನೆಲುಬಾಗಿ ಫೀಲ್ಡಿಂಗ್ ಮಾಡುತ್ತಿದ್ದಾಗ ಚೆಂಡು ಅವರ ಕಿವಿಯ ಹಿಂಭಾಗಕ್ಕೆ ಬಡಿದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಕೆಳಗೆ ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಎರಡು ಅಥವಾ ಅದಕ್ಕಿಂತ ಹೆಚ್ಚು ಕ್ರಿಕೆಟ್ ಪಂದ್ಯಗಳು ಒಂದೇ ಮೈದಾನದಲ್ಲಿ ನಡೆಯುವುದು ಮುಂಬೈ ನಗರದಲ್ಲಿ ಸಾಮಾನ್ಯ ಲಕ್ಷಣವಾಗಿದೆ. ಈ ಪಂದ್ಯಗಳ ವೇಳೆ ಆಟಗಾರರಿಗೆ ಗಾಯಗಳಾದ ಅನೇಕ ಘಟನೆಗಳು ನಡೆದಿದ್ದರೂ, ಸಾವು ಸಂಭವಿಸಿರುವುದು ಇದೇ ಮೊದಲು.

ಆಕಸ್ಮಿಕ ಸಾವಿನ ವರದಿ ದಾಖಲಿಸಿದ್ದು, ಶವಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read