ಅಹಮದಾಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 168 ರನ್ ಭರ್ಜರಿ ಜಯಗಳಿಸಿದೆ. ಸರಣಿಯನ್ನು 2 -1 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿದ್ದು, ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಸತತ 13 ನೇ ಬಾರಿಗೆ ಜಯಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಇಶಾನ್ ಕಿಶನ್ 1, ಶುಭಮನ್ ಗಿಲ್ ಅಜೇಯ 126, ರಾಹುಲ್ ತ್ರಿಪಾಠಿ 44, ಸೂರ್ಯಕುಮಾರ ಯಾದವ್ 24, ಹಾರ್ದಿಕ್ ಪಾಂಡ್ಯ 30, ದೀಪಕ್ ಹೂಡ ಅಜೇಯ 2 ರನ್ ಗಳಿಸಿದರು. ನ್ಯೂಜಿಲೆಂಡ್ ಪರವಾಗಿ ಮಿಚೆಲ್ ಬ್ರೇಸ್ ವೆಲ್, ಬ್ಲೈರ್ ಟಿಕ್ನರ್, ಇಶ್ ಸೋದಿ, ಡೆರ್ಲ್ ಮಿಚೆಲ್ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಮುಗ್ಗರಿಸಿದೆ. ಆರು ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಕೇವಲ 30 ರನ್ ಗಳಿಸಿದ್ದ ನ್ಯೂಜಿಲೆಂಡ್ ಅಂತಿಮವಾಗಿ
ಫಿನ್ ಅಲೆನ್ 3, ಡೆವಾನ್ ಕಾನ್ವೆ 1, ಮಾರ್ಕ್ ಚಾಪ್ ಮನ್ 0, ಗ್ಲೆನ್ ಪಿಲಿಪ್ಸ್ 2, ಡೆರ್ಲ್ ಮಿಚೆಲ್ 35, ಮಿಚೆಲ್ ಬ್ರೇಸ್ ವೆಲ್ 8, ಮಿಚೆಲ್ ಸ್ಯಾಂಟ್ನರ್ 13, ಇಶ್ ಸೋದಿ 0, ಲೂಕಿ ಫೆರ್ಗುಸನ್ 0, ಬ್ಲೇರ್ ಟಿಕ್ನರ್ 1, ಬೆಂಜಮಿನ್ ಅಜೇಯ 1 ರನ್ ಗಳಿಸಿದರು.
ಭಾರತದ ಪರ ಹಾರ್ದಿಕ್ ಪಾಂಡ್ಯ 4, ಅರ್ಷದಿಪ್ ಸಿಂಗ್ 2, ಉಮ್ರಾನ್ ಮಲಿಕ್ 2, ಶಿವಂ ಮಾವಿ 2 ವಿಕೆಟ್ ಪಡೆದರು.