BIG BREAKING: 100 ರನ್ ಗಳಿಂದ ಇಂಗ್ಲೆಂಡ್ ಮಣಿಸಿದ ಭಾರತ, ಸುಲಭ ಗುರಿ ತಲುಪದೇ ಸೋತ ಆಂಗ್ಲರು

ಲಖನೌ: ಲಖನೌದ ಏಕನಾ ಸ್ಪೋರ್ಟ್ಸ್ ಸಿಟಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಏಕೈಕ ಅಜೇಯ ತಂಡವಾಗಿ ಮುಂದುವರೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಇಂಗ್ಲೆಂಡ್ ಗೆಲುವಿಗೆ ಸುಲಭದ ಗುರಿ ನೀಡಿತು. ಭಾರತದ ಪರವಾಗಿ ರೋಹಿತ್ ಶರ್ಮಾ 87, ಕೆ.ಎಲ್. ರಾಹುಲ್ 39, ಸೂರ್ಯ ಕುಮಾರ್ ಯಾದವ್ 49 ರನ್ ಗಳಿಸಿದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲೆ 3, ಕ್ರಿಸ್ ವೋಕ್ಸ್ 2, ಆದಿಲ್ ರಶೀದ್ 2 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 34.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು.

ಜಾನಿ ಬೈರ್ ಸ್ಟೊ 14, ಡೇವಿಡ್ ಮಿಲನ್ 16, ಮೋಹಿನ್ ಅಲಿ 15, ಲಿಯಾಮ್ ಲಿವಿಂಗ್ ಸ್ಟೋನ್ 27, ಡೇವಿಡ್ ವಿಲ್ಲೆ ಅಜೇಯ 16 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಶಮಿ 4, ಕುಲದೀಪ್ ಯಾದವ್ 2, ಬೂಮ್ರಾ 3, ರವೀಂದ್ರ ಜಡೇಜ 1 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ದಾಖಲೆ ಮುಂದುವರೆಸಿದೆ. ಸತತ 6 ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read