ಭಾರತ –ಆಸೀಸ್ ಹೈವೋಲ್ಟೇಜ್ ವಿಶ್ವಕಪ್ ಫೈನಲ್ ಪಂದ್ಯದ ಕಾರಣಕ್ಕೆ ಪರೀಕ್ಷೆ ಮುಂದೂಡಿಕೆ: ಸುತ್ತೋಲೆ ವೈರಲ್

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 2023 ರ ಏಕದಿನ ವಿಶ್ವಕಪ್ ಫೈನಲ್‌ಗಾಗಿ ಫರಿದಾಬಾದ್‌ನ ಶಾಲೆಯೊಂದು ತಮ್ಮ ಯುನಿಟ್ ಟೆಸ್ಟ್ ಮುಂದೂಡಿದೆ. ಶಾಲೆಯ ಸುತ್ತೋಲೆಯ ಫೋಟೋ ಸಾಮಾಜಿಕ ವಲಯದಲ್ಲಿ ವೈರಲ್ ಆಗುತ್ತಿದೆ.

ನವೆಂಬರ್ 19 ಭಾನುವಾರ ICC ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ಕಾರಣದಿಂದ ಮತ್ತು ವಿದ್ಯಾರ್ಥಿ ಸಂಘದಿಂದ ಸ್ವೀಕರಿಸಿದ ಹಲವಾರು ವಿನಂತಿಗಳನ್ನು ಪರಿಗಣಿಸಿ, ನವೆಂಬರ್ 20 ರಂದು ನಿಗದಿಪಡಿಸಲಾಗಿದ್ದ VI ರಿಂದ XII ತರಗತಿಗಳಿಗೆ ಯುನಿಟ್ ಪರೀಕ್ಷೆಯನ್ನು ಈಗ ನವೆಂಬರ್ 21 ರಂದು ನಡೆಸಲಾಗುವುದು ಎಂದು ಸುತ್ತೋಲೆಯಲ್ಲಿ ಬರೆಯಲಾಗಿದೆ.

ಕ್ರಿಕೆಟ್ ಕುಟುಂಬಗಳನ್ನು ಒಟ್ಟಿಗೆ ಸೇರಿಸಲು ಉತ್ತಮ ಮಾರ್ಗವಾಗಿದೆ ಎಂದು ಡಿಎವಿ-14 ಫರಿದಾಬಾದ್‌ನಲ್ಲಿ ನಾವು ಅರ್ಥಮಾಡಿಕೊಂಡಿದ್ದೇವೆ. ಇದು ಎಲ್ಲಾ ವಯಸ್ಸಿನ ಮತ್ತು ಎಲ್ಲಾ ವರ್ಗದ ಜನರು ಆನಂದಿಸಬಹುದಾದ ಆಟವಾಗಿದೆ. ಈ ಕುಟುಂಬದ ಸಮಯವನ್ನು ನಾವು ನಿಮಗೆ ನೀಡುತ್ತಿರುವಾಗ, ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ನೀವು ಶಾಲೆಗೆ ಧನ್ಯವಾದ ಸಲ್ಲಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ಭಾರತ ಕ್ರಿಕೆಟ್ ತಂಡವು ವಿಶ್ವಕಪ್-2023 ಜಯಿಸಲಿ ಎಂದು ಒಟ್ಟಾಗಿ ಪ್ರಾರ್ಥಿಸೋಣ ಎಂದು ಸುತ್ತೋಲೆ ಮುಕ್ತಾಯಗೊಂಡಿದೆ.

https://twitter.com/mufaddal_vohra/status/1726107797056860458

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read