ಮುಂಬೈ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ –ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಅವರಿಗೆ ದುಬಾರಿ ಗಿಫ್ಟ್ ಬಂದಿವೆ.
ವಿರಾಟ್ ಕೊಹ್ಲಿ 2.17 ಕೋಟಿ ರೂ ಮೌಲ್ಯದ ಬಿಎಂಡಬ್ಲ್ಯೂ ಕಾರ್, ಎಂಎಸ್ ಧೋನಿ 80 ಲಕ್ಷ ರೂಪಾಯಿ ಮೌಲ್ಯದ ಕವಾಸಕಿ ನಿಂಜಾ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.
ಆಥಿಯಾ ಶೆಟ್ಟಿಗೆ ನಟ ಸಲ್ಮಾನ್ ಖಾನ್ 1.64 ಕೋಟಿ ರೂ. ಮೌಲ್ಯದ ಆಡಿ ಕಾರ್, ಜಾಕಿಶ್ರಾಫ್ 30 ಲಕ್ಷ ರೂಪಾಯಿ ಮೌಲ್ಯದ ವಾಚ್, ಅರ್ಜುನ್ ಕಪೂರ್ 1.5 ಕೋಟಿ ರೂ ಮೌಲ್ಯದ ವಜ್ರ ಖಚಿತ ಬ್ರೇಸ್ ಲೈಟ್ ನೀಡಿದ್ದಾರೆ.
ಸುನಿಲ್ ಶೆಟ್ಟಿ ಮುಂಬೈನಲ್ಲಿ 50 ಕೋಟಿ ರೂ ಮೌಲ್ಯದ ಐಶಾರಾಮಿ ಅಪಾರ್ಟ್ಮೆಂಟ್ ಅನ್ನು ಮಗಳು, ಅಳಿಯನಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಸಹ ಆಟಗಾರರು ಮತ್ತು ಪ್ರಮುಖರಿಂದ ದುಬಾರಿ ಉಡುಗೊರೆಗಳು ಬಂದಿವೆ.