ಸ್ಪೇನ್: ಸುಮಾರು 230 ಅಡಿ ಆಳದ ಗುಹೆಯಲ್ಲಿ ಸುಮಾರು 500 ದಿನವನ್ನು ಒಬ್ಬಂಟಿಯಾಗಿ ಕಳೆದಿದ್ದಾರೆ ಸ್ಪೇನ್ ಮಹಿಳೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ 50 ವರ್ಷದ ಪರ್ವತಾರೋಹಿ ಈ ಸಾಧನೆ ಮಾಡಿದ್ದಾರೆ. ಬಿಟ್ರೀಜ್ ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ ಗುಹೆಯಲ್ಲಿ ತಂಗಿದ್ದರು.
ಬಹಳ ದಿನ ಆಧುನಿಕ ಮಾನವ ಗುಹೆಯಲ್ಲಿ ಇದ್ದು ಯಶಸ್ವಿಯಾಗಿ ಹೊರ ಬಂದಿದ್ದು ಇದೇ ಮೊದಲು. ಇದೊಂದು ವಿಶ್ವದಾಖಲೆ ಆಗಿದೆ.
ಬಿಟ್ರೀಜ್ ಅವರು ಗುಹೆಯಲ್ಲಿದ್ದ ವೇಳೆ ತಮ್ಮೊಡನೆಯೇ ಮಾತನಾಡಿಕೊಳ್ಳುತ್ತಿದ್ದರು. ಅದು ಅನಿವಾರ್ಯವಾಗಿತ್ತು. ಬಿಟ್ರೀಜ್ ಅವರು ಗುಹೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಧ್ಯಯನ ಮಾಡಲು ಸುಮಾರು 60 ಪುಸ್ತಕಗಳನ್ನು ತಮ್ಮೊಡನೆ ಕೊಂಡೊಯ್ದಿದ್ದರು ಎಂದು ತಿಳಿಸಿದ್ದಾರೆ. ತಮ್ಮ ಗುಹೆಯ ವಾಸದ ಕುರಿತು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಹಕಾರಿಯಾಗಲು ಎರಡು ಕ್ಯಾಮರಾಗಳನ್ನು ತಮ್ಮೊಡನೆ ಬಿಟ್ರೀಜ್ ಕೊಂಡೊಯ್ದಿದ್ದರು.
ಗುಹೆಯ ವಾಸ ಬಿಟ್ರೀಜ್ ಅವರಿಗೆ ಮೊದಲು ಅಹಿತಕರವಾಗಿತ್ತು. ತಮ್ಮ ಸಂಚಾರಕ್ಕೆ ಅನುಕೂಲವಾಗಲು ತಲೆಯ ಮೇಲೆ ಲೈಟ್ ಧರಿಸಿದ್ದರು. ಬಿಟ್ರೀಜ್ ಅವರು ಹಲವು ಸವಾಲು ಎದುರಿಸಿ ತಮ್ಮ ಗುಹೆಯ ವಾಸ ಪೂರೈಸಿದ್ದಾರೆ.
https://twitter.com/BaapofOption/status/1647109386865889280?ref_src=twsrc%5Etfw%7Ctwcamp%5Etweetembed%7Ctwterm%5E1647109386865889280%7Ctwgr%5Eec1c65ff085c2ceea26907701d2f11c95120f4b9%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fspain-50-year-old-woman-who-went-into-a-cave-in-2021-returns-to-earth-after-500-days-watch-video