ಮಂಗಳೂರು: ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯ ವಿರುದ್ಧ ದೂರು ನೀಡಲು ಬಂದಿದ್ದ ಸೌಜನ್ಯ ತಾಯಿಗೆ ಎಸ್ ಐಟಿ ಭೇಟಿಗೆ ಅವಕಾಶ ನೀಡದೇ ಪೊಲೀಸರು ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡವನ್ನು ಭೇಟಿಯಾಗಲೆಂದು ಇಂದು ಸೌಜನ್ಯ ತಾಯಿ ಕುಸುಮಾವತಿ ಆಗಮಿಸಿದ್ದರು. ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದ ಅವರನ್ನು ತಡೆದ ಪೊಲೀಸರು, ಎಸ್ ಐಟಿ ಭೇಟಿಗೆ ಅನುಮತಿ ಪಡೆದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕುಸುಮಾವತಿ ಅನುಮತಿ ಪದೆದಿಲ್ಲ ಎಂದು ತಿಳಿಸಿದ್ದಾರೆ.
ಅನುಮತಿ ಪಡೆಯದ ಕಾರಣಕ್ಕೆ ಕುಸುಮಾವತಿ ಅವರಿಗೆ ಎಸ್ ಐಟಿ ಭೇಟಿಗೆ ಅವಕಾಶ ನೀಡಿಲ್ಲ. ಅವರನ್ನು ವಾಪಸ್ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.