ಪಿ ವಿ ಆರ್ ಸ್ವಾಮಿ ನಿರ್ದೇಶನದ ‘s-? ಸೈಲೆನ್ಸ್’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು. ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಎಸ್ ಕೆ ಎಂ ಮೂವೀಸ್ ಬ್ಯಾನರ್ ನಲ್ಲಿ ಮೋಹನ್ ಕುಮಾರ್ ನಿರ್ಮಾಣ ಮಾಡಿದ್ದು, ಪ್ರದೀಪ್ ಪೂಜಾರಿ ಉಗ್ರಂ. ನಿಕಿತಾ ಸ್ವಾಮಿ, ಮಂಗಳೂರು ಮೀನನಾಥ, ಕಾಮಿಡಿ ಕಿಲಾಡಿ ಸದಾನಂದ, ಸುಶ್ಮಿತಾ ಗೌಡ, ವಿಂಧ್ಯಾ, ಮೀರಾ, ಪ್ರೀತಿ, ಪ್ರಜ್ವಲ್ ತಾರಾ ಬಳಗದಲ್ಲಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ಪಿ ವಿ ಆರ್ ಸ್ವಾಮಿ ಛಾಯಾಗ್ರಹಣವಿದೆ.ರಾಜ್ ಭಾಸ್ಕರ್ ಸಂಗೀತ ಸಂಯೋಜನೆ ನೀಡಿದ್ದಾರೆ.
Get ready for the suspense! 'Silence' is hitting cinemas soon. 🎬✨ #Silence #ComingSoon #Thriller #a2music #kannadamovies pic.twitter.com/TV8UwekUT4
— A2 Music (@A2MusicSouth) July 2, 2024