ಮಂಗಳೂರು : ಮಂಗಳೂರಿನ ಖ್ಯಾತ ಉದ್ಯಮಿಯ ಪುತ್ರ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಶಾಂಭವಿ ನದಿ ತೀರದಲ್ಲಿ ಅಭಿಷೇಕ್ ಆಳ್ವ (29) ಮೃತದೇಹ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ನಿಖರ ಕಾರಣ ತಿಳಿದು ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಲಿ ತಾಲೂಕಿನ ಬಪ್ಪನಾಡು ಬಳಿ ಈ ಘಟನೆ ನಡೆದಿದೆ. ಈತ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಉದ್ಯಮಿ ನವೀನ್ ಚಂದ್ರ ಆಳ್ವಾ ಪುತ್ರ ಅಭಿಷೇಕ್ ಮೃತಪಟ್ಟ ಯುವಕ. ನ.5 ರಂದು ಮೂಲ್ಕಿ ಬಪ್ಪನಾಡು ಬ್ರಿಡ್ಜ್ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ನದಿ ತೀರದಲ್ಲಿ ಮತದೇಹ ಪತ್ತೆಯಾಗಿದೆ. ಅಭಿಷೇಕ್ ತನ್ನ ತಂದೆಯ ಉದ್ಯಮವನ್ನು ಮುನ್ನಡೆಸುತ್ತಿದ್ದರು. ಹಾಗೂ ಇವರದ್ದು ತಿರುವೈಲು ಗುತ್ತು ಕರಾವಳಿ ಕಂಬಳದಲ್ಲಿ ಗುರುತಿಸಿಕೊಂಡಿರುವ ಮನೆತನ ಆಗಿದೆ . ಅಭಿಷೇಕ್ ನಾಪತ್ತೆ ಕುರಿತು ಪಡುಬಿದ್ರಿ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದೀಗ ಮಂಗಳೂರಿನ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
