ಹಾಸನ : ಪತ್ನಿಯನ್ನು ತವರು ಮನೆ ಗೆಕರೆದುಕೊಂಡು ಹೋಗಿದ್ದಕ್ಕೆ ಅಳಿಯನೋರ್ವ ಅತ್ತೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಮೃತರನ್ನು ಫೈರೋಜಾ (58) ಎಂದು ಗುರುತಿಸಲಾಗಿದೆ. ರಾಮನಾಥಪುರದ ನಿವಾಸಿ ಫೈರೋಜಾ ತನ್ನ ಮಗಳು ಶೆಮಿನಾ ಬಾನು ಅವರನ್ನ ಬೆಟ್ಟದಪುರದ ರಸುಲ್ಲಾ ಜೊತೆ ಮದುವೆ ಮಾಡಿಕೊಟ್ಟಿದ್ದರು.
ಆದರೆ ಇವರಿಗೆ ಮದುವೆಯಾಗಿ 10 ವರ್ಷ ಆದರೂ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಪತ್ನಿಯನ್ನು ಅವಮಾನಿಸಿ ಕಿರುಕುಳ ನೀಡುತ್ತಿದ್ದನು. ಇದನ್ನ ನೋಡಿ ರೋಸಿ ಹೋದ ಅತ್ತೆ ಫೈರೋಜಾ ಮಗಳನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಳು. ಇದರಿಂದ ರೊಚ್ಚಿಗೆದ್ದ ಅಳಿಯ ಅತ್ತೆ ಮನೆಗೆ ಹೋಗಿ ಅತ್ತೆ ಮೇಲೆ ಎರಗಿ ಚಾಕು ಇರಿದು ಹತ್ಯೆ ಮಾಡಿದ್ದಾನೆ.