ಹಾರ್ದಿಕ್ ಪಾಂಡ್ಯಾ ಜೊತೆ ಡಿವೋರ್ಸ್ ವದಂತಿ ಬೆನ್ನಲ್ಲೇ ಕುತೂಹಲಕಾರಿ ಪೋಸ್ಟ್ ಹಾಕಿದ ನತಾಶಾ

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಪತ್ನಿ ನತಾಶಾ ಸ್ಟಾಂಕೋವಿಕ್ ಅವರು ದೂರವಾಗಲಿದ್ದಾರೆ ಎಂಬ ಮಾತು ಹೆಚ್ಚಾಗಿ ಕೇಳಿಬರುತ್ತಿದೆ.

ನಾಲ್ಕು ವರ್ಷಗಳ ನಂತರ ಸಂಸಾರದಿಂದ ದೂರವಾಗಿ ವಿಚ್ಚೇದನ ಪಡೆಯಲಿದ್ದು ಪತ್ನಿಗೆ ಜೀವನೋಪಾಯಕ್ಕೆ ಹಾರ್ದಿಕ್ ತನ್ನ ಸಂಪತ್ತಿನ 70% ನೀಡಲಿದ್ದಾರೆ ಎಂಬುದು ಸುದ್ದಿಯಾಗ್ತಿದೆ. ಈ ವದಂತಿ ನಡುವೆ ಪಾಂಡ್ಯಾ ಪತ್ನಿ ನತಾಶಾ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ವೊಂದನ್ನ ಹಾಕಿದ್ದು ಕುತೂಹಲ ಮೂಡಿಸಿದೆ.

“ಯಾರೋ ಒಬ್ಬರು ಬೀದಿಗಿಳಿಯಲಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ರಸ್ತೆ ಸಂಚಾರ ಚಿಹ್ನೆಗಳ ಚಾರ್ಟ್‌ ಚಿತ್ರವನ್ನು ಹಂಚಿಕೊಂಡಿದ್ದಾರೆ. ನತಾಶಾ ಡ್ರೈವಿಂಗ್ ಕಲಿಯುತ್ತಿದ್ದಾರಾ ಅಥವಾ ಹಾರ್ದಿಕ್ ಪಾಂಡ್ಯ ಜೊತೆಗಿನ ತನ್ನ ವಿಚ್ಛೇದನದ ವರದಿಗಳನ್ನು 70% ಸಂಪತ್ತಿನ ಇತ್ಯರ್ಥದೊಂದಿಗೆ ಪರೋಕ್ಷವಾಗಿ ದೃಢಪಡಿಸುತ್ತಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ನತಾಶಾ , ಪಾಂಡ್ಯ ಹೆಸರನ್ನು ತೆಗೆದ ನಂತರ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಅವರ ಪ್ರತ್ಯೇಕತೆಯ ಬಗ್ಗೆ ಊಹಾಪೋಹಗಳು ಬೆಳಕಿಗೆ ಬಂದವು.

ಇದರಲ್ಲಿ ಹಾರ್ದಿಕ್ ಪತ್ನಿ ತನ್ನ ಹೆಸರಿನೊಂದಿಗಿದ್ದ ಹಾರ್ದಿಕ್ ಹೆಸರನ್ನು ಇನ್‌ಸ್ಟಾಗ್ರಾಮ್‌ನಿಂದ ಖಾತೆಯಿಂದ ತೆಗೆದುಹಾಕಿದ್ದರು. ಅಷ್ಟೇ ಅಲ್ಲದೇ ಪತಿ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಪಾಂಡ್ಯಾ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ನತಾಶಾ ಫೋಟೋಗಳನ್ನು ಡಿಲೀಟ್ ಮಾಡಿಲ್ಲ.

https://twitter.com/div_yumm/status/1794243341686890906?ref_src=twsrc%5Etfw%7Ctwcamp%5Etweetembed%7Ctwterm%5E1794243341686890906%7Ctwgr%5E665e431a24f7af537316dd36e044cb9e

https://twitter.com/NCMIndiaa/status/1794243908504817705?ref_src=twsrc%5Etfw%7Ctwcamp%5Etweetembed%7Ctwterm%5E1794243908504817705%7Ctwgr%5E665e431a24f7af537316dd36e0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read