ಪ್ರೀತಿಯಲ್ಲಿ ಬಿದ್ದವರಲ್ಲಿ ಕಾಣಿಸುತ್ತೆ ಈ ಕೆಲ ಬದಲಾವಣೆ

ಪ್ರೀತಿಯ ಬಗ್ಗೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರೀತಿ ಅನುಭವಿಸಿದಾಗ ಮಾತ್ರ ತಿಳಿಯುವಂತಹದ್ದು. ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ ಎಂಬ ಮಾತಿದೆ. ಕೆಲವರಿಗೆ ತಾವು ಪ್ರೀತಿಯಲ್ಲಿ ಬಿದ್ದಿದ್ದೇವಾ, ಇಲ್ಲವಾ ಎಂಬ ಗೊಂದಲವಿರುತ್ತದೆ. ನಿಮ್ಮಲ್ಲಾಗುವ ಕೆಲ ಬದಲಾವಣೆ, ನೀವು ಪ್ರೀತಿಯಲ್ಲಿ ಬಿದ್ದಿರುವುದನ್ನು ಹೇಳುತ್ತದೆ.

ಪ್ರೀತಿ ಶುರುವಾದ್ರೆ ಆತ ಸಂಪೂರ್ಣವಾಗಿ ಬದಲಾಗ್ತಾನೆ. ಆತನಿಗೆ ತಾನು ಪ್ರೀತಿಸುತ್ತಿರುವ ಸಂಗಾತಿಯ ಯಾವುದೇ ತಪ್ಪು ಕಾಣಿಸುವುದಿಲ್ಲ. ಪಾಸಿಟಿವ್ ಆಲೋಚನೆ ಹೆಚ್ಚಾಗುತ್ತದೆ ಆಗೊಮ್ಮೆ ಈಗೊಮ್ಮೆ ಸಂಗಾತಿ ಮಾತು ನೆನಪಾಗುತ್ತದೆ. ಪದೇ ಪದೇ ಸಂಗಾತಿ ನೋಡಬೇಕು ಎಂದೆನಿಸುತ್ತದೆ.

ಬೇಡವೆಂದರೂ ಮತ್ತೆ ಮತ್ತೆ ಅವರನ್ನೇ ನೋಡಬೇಕೆಂಬ ಬಯಕೆ ಮೂಡುತ್ತದೆ. ಮನಶ್ಶಾಸ್ತ್ರಜ್ಞ ಮಾರ್ಕ್ ಹೆಕ್ಸ್ಟರ್ ಹೇಳುವ ಪ್ರಕಾರ, ಪ್ರೀತಿಯಲ್ಲಿ ಬಿದ್ದಿರುವುದಕ್ಕೆ ಇದೇ ಸ್ಪಷ್ಟವಾದ ಸುಳಿವಂತೆ. ಪ್ರೀತಿಸುವ ವ್ಯಕ್ತಿ ಸದಾ ಆಕರ್ಷಕವಾಗಿ ಕಾಣ್ತಾನೆ. ಆತನನ್ನು ಕಣ್ತುಂಬಿಕೊಳ್ಳುವ ಬಯಕೆ ಸದಾ ಇರುತ್ತದೆ.

ಪ್ರೀತಿಸುವವರು ಜೊತೆಯಲ್ಲಿದ್ದಾಗ ಸಮಯ ಕಳೆದದ್ದು ತಿಳಿಯುವುದಿಲ್ಲ. ಅವರ ಮಾತು, ಕಣ್ಣು, ಅವರ ಬಿಸಿ ಉಸಿರು ನಿಮ್ಮನ್ನು ಮರೆಸುತ್ತದೆ.

ಪ್ರೀತಿ ಮಾಡುವವರು ಹೆಚ್ಚು ರೊಮ್ಯಾಂಟಿಕ್ ಹಾಡು, ಸಿನೆಮಾ ಇಷ್ಟಪಡುತ್ತಾರೆ. ಮನಸ್ಸು ತೇಲಾಡುತ್ತಿರುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅದೇನೋ ವಿಚಿತ್ರ ಖುಷಿ, ತಳಮಳ. ಕಲ್ಪನಾ ಲೋಕದಲ್ಲಿ ಸದಾ ಸಂಚರಿಸಬೇಕೆಂಬ ಬಯಕೆ. ಇದೆಲ್ಲವೂ ನೀವು ಪ್ರೀತಿಯಲ್ಲಿದ್ದೀರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read