ಬೆಂಗಳೂರು: ವಸತಿ, ವಸತಿಯೇತರ ಮತ್ತು ವಾಣಿಜ್ಯ ಕಟ್ಟಡ ಹಾಗೂ ಖಾಲಿ ನಿವೇಶನಗಳಿಗೆ ಘನ ತ್ಯಾಜ್ಯ ವಿಲೇವಾರಿ ಶುಲ್ಕ ವಿಧಿಸಲಾಗಿದೆ.
ಕಸ ವಿಲೇವಾರಿಗೆ ಬಳಕೆದಾರರ ಶುಲ್ಕದ ದರವನ್ನು ಅಂತಿಮಗೊಳಿಸಿ ಬಿಬಿಎಂಪಿ ಶನಿವಾರ ಆದೇಶ ಹೊರಡಿಸಿದ್ದು, ಏಪ್ರಿಲ್ 1ರಿಂದಲೇ ಬಳಕೆದಾರರ ಶುಲ್ಕ ಅನ್ಭಯವಾಗುತ್ತದೆ. 46 ಲಕ್ಷ ಆಸ್ತಿಗಳ ಮಾಲೀಕರು ಘನತ್ಯಾಜ್ಯ ವಿಲೇವಾರಿ ಬಳಕೆದಾರರ ಶುಲ್ಕ ಪಾವತಿಸಬೇಕಿದ್ದು, ಇದರಿಂದ ಸುಮಾರು 600 ರಿಂದ 750 ಕೋಟಿ ರೂಪಾಯಿ ಆದಾಯ ಸಂಗ್ರಹ ಗುರಿ ಹೊಂದಲಾಗಿದೆ.
ಆಸ್ತಿ ತೆರಿಗೆ ಭಾಗವಾಗಿಯೇ ಘನ ತ್ಯಾಜ್ಯ ವಿಲೇವಾರಿ ಬಳಕೆದಾರ ಶುಲ್ಕವನ್ನು ಸಂಗ್ರಹಿಸಲಿದ್ದು, ಇದರಿಂದ ಆಸ್ತಿ ತೆರಿಗೆ ಪ್ರಮಾಣದಲ್ಲಿ ಶೇಕಡ 30 ರಿಂದ 35 ರಷ್ಟು ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.