ಹತ್ರಾಸ್ ಕಾಲ್ತುಳಿತ: ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು

ಉತ್ತರ ಪ್ರದೇಶದ ಇಟಾಹ್‌ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹಗಳ ರಾಶಿಯನ್ನು ನೋಡಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅವರನ್ನು KYRT ಅವಘರ್‌ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ದುರಂತದ ನಂತರ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ಕರ್ತವ್ಯಕ್ಕೆ ಅವರನ್ನು ಕರೆಸಲಾಗಿತ್ತು. ಅಷ್ಟೊಂದು ಮೃತ ದೇಹಗಳನ್ನು ಕಂಡ ಅವರಿಗೆ ಹೃದಯಾಘಾತವಾಗಿದೆ. ಕಾನ್‌ಸ್ಟೆಬಲ್ ಮೂಲತಃ ಅಲಿಗಢ ಜಿಲ್ಲೆಯ ಬನ್ನಾ ದೇವಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ಧಾರ್ಥನಗರದ ನಿವಾಸಿಯಾಗಿದ್ದಾರೆ.

ಹತ್ರಾಸ್‌ನ ಸಿಕಂದರರಾವ್‌ ನಲ್ಲಿ ಭೋಲೆಬಾಬಾ ಅವರ ಸತ್ಸಂಗದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 120 ಮಂದಿ ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಅಲ್ಲಿಯೂ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read