ರೀಲ್ಸ್ ಮೂಲಕ ಜನಪ್ರಿಯತೆ ಗಿಟ್ಟಿಸುವ ಹುನ್ನಾರದಲ್ಲಿ ಯುವಕರು ಮಾತ್ರವಲ್ಲದೇ ಹಿರಿಯ ವಯಸ್ಕರೂ ಕೂಡಾ ಪರಿಜ್ಞಾನ ಮರೆತು ಏನೇನೋ ಮಾಡುವುದು ದಿನೇ ದಿನೇ ವಿಪರೀತವಾಗುತ್ತಲೇ ಬಂದಿದೆ.
ಮಹಾರಾಷ್ಟ್ರದ ಸೊಲ್ಲಾಪುರದ ಯುವಕನೊಬ್ಬ ಬೈಕ್ ಮೇಲೆ ಸ್ಟಂಟ್ ಮಾಡಿಕೊಂಡು ಮಾಡಿದ ರೀಲ್ಸ್ ಒಂದು ಆನ್ಲೈನ್‌ನಲ್ಲಿ ವೈರಲ್ ಆಗತ್ತಲೇ ಅದೀಗ ಆತನಿಗೆ ಸಂಕಟ ತಂದಿಟ್ಟಿದೆ. ನಗರದ ಎನ್‌ಸಿಪಿ ಕಾರ್ಪೋರೇಟ್ ನಾಗೇಶ್ ಗಾಯಕ್ವಾಡ್‌ರ ಪುತ್ರ ಚೇತನ್ ಎಂದು ಗುರುತಿಸಲಾದ ಈ ಯುವಕ ಚಲಿಸುತ್ತಿರುವ ಬೈಕ್ ಮೇಲೆ ಕುಳಿತು ಪಿಸ್ತೂಲ್‌ನಲ್ಲಿ ಶೂಟ್ ಮಾಡುತ್ತಿರುವಂತೆ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ಚಲಿಸುತ್ತಿರುವ ಬೈಕಿನ ಮೇಲೆ ಕುಳಿತು ತನ್ನೆರಡೂ ಕೈಗಳಿಂದ ಪಿಸ್ತೂಲ್‌ಅನ್ನು ಗ್ರಿಪ್ ಮಾಡಿಕೊಂಡು ಪೋಸ್ ಕೊಟ್ಟಿರುವ ಚೇತನ್ ಜೊತೆಗೆ ಈ ಘಟನೆಯಲ್ಲಿ ಮತ್ತೊಬ್ಬ ಸಹ ಭಾಗಿಯಾಗಿದ್ದು, ಆತನ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.
ಫೇಸ್ಬುಕ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋ ವೈರಲ್ ಆಗುತ್ತಲೇ ಇಲ್ಲಿನ ಸಲ್ಗರ್ ವಸ್ತಿ ಪೊಲೀಸ್ ಠಾಣೆಯಲ್ಲಿ ಭಾರತೀಯ ಶಸ್ತ್ರಗಳ ಕಾಯಿದೆ 505, 279ನೇ ವಿಧಿಯಡಿ ದೂರು ದಾಖಲಿಸಲಾಗಿದೆ.
https://twitter.com/hplivenews1/status/1635197321616171010?ref_src=twsrc%5Etfw%7Ctwcamp%5Etweetembed%7Ctwterm%5E1635197321616171010%7Ctwgr%5Ea5bb62e40f48cd054c25ec6bd67b31f1c7c786b2%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fsolapur-road-stunt-video-biker-poses-with-gun-to-create-viral-reels-fir-registered