ಹಾಸನ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಶೈಕ್ಷಣಿಕ ವರ್ಷದಲ್ಲಿ ಪ್ರತಿಷ್ಠಿತ ಶಾಲೆಗೆ 6ನೇ ತರಗತಿ ಪ್ರವೇಶ ಬಯಸುವ ಪ್ರತಿಭಾವಂತ ಪ.ಜಾತಿ/ಪ.ವರ್ಗದ ಬಾಲಕ/ಬಾಲಕಿಯರಿಂದ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.
5ನೇ ತರಗತಿಯಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಹಾಗೂ ವಾರ್ಷಿಕ 2.50 ಲಕ್ಷ ಆದಾಯದ ಮಿತಿಯೊಳಗಿರುವ ಅರ್ಹ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ ನಲ್ಲಿ ಏ. 15 ರಿಂದ ಮೇ.3 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ, ಹಾಸನ ರವರನ್ನು ಸಂಪರ್ಕಿಸಬಹುದಾಗಿದೆ.