ಹೊಸ ವರ್ಷಕ್ಕೆ ಚಾಲಕರು, ಕ್ಲೀನರ್ ಸೇರಿ 30 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಗಿಫ್ಟ್

ಬೆಂಗಳೂರು: ಖಾಸಗಿ ಬಸ್, ಸರಕು ಸಾಗಣೆ ವಾಹನ, ಆಟೋ, ಟ್ಯಾಕ್ಸಿ ಚಾಲಕರು, ನಿರ್ವಾಹಕರು, ಕ್ಲೀನರ್ ಸೇರಿ ರಾಜ್ಯದಲ್ಲಿನ ಸುಮಾರು 30 ಲಕ್ಷ ಖಾಸಗಿ ವಾಣಿಜ್ಯ ವಾಹನಗಳ ಸಿಬ್ಬಂದಿಗೆ ಹೊಸ ವರ್ಷದ ಉಡುಗೊರೆಯಾಗಿ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಲಾಗುತ್ತಿದೆ.

ವಾಣಿಜ್ಯ ವಾಹನಗಳ ಚಾಲಕರು ಸೇರಿದಂತೆ ಮೆಕಾನಿಕ್, ಕ್ಲೀನರ್, ಬಾಡಿ ಬಿಲ್ಡಿಂಗ್ ಕೆಲಸದವರು ಹಾಗೂ ಇತರರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಯೋಜನೆಯ ಅನುಷ್ಠಾನಕ್ಕೆ ಆರಂಭಿಕವಾಗಿ 30 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ, ಒಂದು ಲಕ್ಷ ರೂಪಾಯಿವರೆಗೆ ವೈದ್ಯಕೀಯ ಚಿಕಿತ್ಸೆ ವೆಚ್ಚ ಮರುಪಾವತಿ, ಶಾಶ್ವತ ಅಂಗವಿಕಲಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ, ಮೃತರ ಕುಟುಂಬದ ಇಬ್ಬರು ಮಕ್ಕಳಿಗೆ ಒಂದನೇ ತರಗತಿಯಿಂದ ಪಿಯುಸಿವರೆಗೆ ಓದಲು ಶೈಕ್ಷಣಿಕ ನೆರವು, ಕಾರ್ಮಿಕ ಕಲ್ಯಾಣ ಮಂಡಳಿಯ ಇತರೆ ಸೌಲಭ್ಯಗಳನ್ನು ನೀಡಲಾಗುವುದು.

ಸದ್ಯಕ್ಕೆ ಮಂಡಳಿ ನಿಧಿಯಿಂದ ಯೋಜನೆ ಆರಂಭಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ವಾಹನಗಳ ನೋಂದಣಿ ಸಂದರ್ಭದಲ್ಲಿ ಹೆಚ್ಚುವರಿ ಸೆಸ್ ಮೂಲಕ ಸಂಪನ್ಮೂಲ ಸಂಗ್ರಹಿಸಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read