ಸಾಮಾಜಿಕ ಭದ್ರತಾ ಸಂಧ್ಯಾ ಸುರಕ್ಷಾ ಯೋಜನೆ ನಕಲಿ ಮಂಜೂರಾತಿ ಪತ್ರ ವಿತರಣೆ: ಸೇವಾ ಸಿಂಧು ಆಪರೇಟರ್ ದೂರು

ದಾವಣಗೆರೆ: ಸಾಮಾಜಿಕ ಭದ್ರತೆಯ ಸಂಧ್ಯಾ ಸುರಕ್ಷಾ ಯೋಜನೆಯ ನಕಲಿ ಮಂಜೂರಾತಿ ಪತ್ರ ವಿತರಿಸಿದ ಆರೋಪದ ಮೇಲೆ ಸೇವಾ ಸಿಂಧು ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಾಯಕೊಂಡ ಸಮೀಪದ ಕಂದಗಲ್ಲು ಗ್ರಾಮದ ಸೇವಾ ಸಿಂಧು ಕೇಂದ್ರದ ನವೀನ್ ಪಿ.ಜಿ. ನಕಲಿ ಮಂಜೂರಾತಿ ಪತ್ರಗಳನ್ನು ನೀಡಿದ್ದಾರೆ. ಈ ಬಗ್ಗೆ ಬಂದ ದೂರು ಆಧರಿಸಿ ಪತ್ರಗಳನ್ನು ಪರಿಶೀಲಿಸಿದಾಗ ಆದೇಶ ಪ್ರತಿಗಳಿಗೆ ಇಲಾಖೆಯ ಯಾವುದೇ ಡಿಜಿಟಲ್ ಸಹಿ ಇಲ್ಲದಿರುವುದು ಕಂಡುಬಂದಿದೆ.

ಈ ಕುರಿತಾಗಿ ಗ್ರಾಮ ಆಡಳಿತ ಅಧಿಕಾರಿ, ರಾಜಸ್ವ ನಿರೀಕ್ಷಕ, ಫಲಾನುಭವಿಗಳ ಹೇಳಿಕೆ ಆಧರಿಸಿ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಯಕೊಂಡ ನಾಡಕಚೇರಿ ಉಪ ತಹಶೀಲ್ದಾರ್ ಹೆಚ್.ಬಿ. ಹಾಲೇಶ್ ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read