ಆಲೂಗಡ್ಡೆಯ ಸಿಹಿ ಅಂಶ ಕಡಿಮೆ ಮಾಡಲು ಸ್ವಲ್ಪ ಹೊತ್ತು ಇದರಲ್ಲಿ ನೆನೆಸಿಡಿ

ಆಲೂಗಡ್ಡೆ ತುಂಬಾ ಆರೋಗ್ಯಕರವಾದ, ರುಚಿಕರವಾದ ತರಕಾರಿ. ಆದರೆ ಇದರಲ್ಲಿ ಸ್ವಲ್ಪ ಸಿಹಿ ಅಂಶವಿರುತ್ತದೆ. ಹಾಗಾಗಿ ಅದರ ಸಿಹಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

*ವಿನೆಗರ್ ಬಳಸಿ ಆಲೂಗಡ್ಡೆಯ ಸಿಹಿಯನ್ನು ನಿವಾರಿಸಬಹುದು. ಆಲೂಗಡ್ಡೆಯನ್ನು ಅಡುಗೆಗೆ ಬಳಸುವ ಮುನ್ನ 2 ಚಮಚ ವಿನೆಗರ್ ಅನ್ನು ನೀರಿನಲ್ಲಿ ಮಿಕ್ಸ್ ಮಾಡಿ ಅದಕ್ಕೆ ಕಟ್ ಮಾಡಿದ ಆಲೂಗಡ್ಡೆಯನ್ನು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ಬಳಿಕ ಅಡುಗೆಗೆ ಬಳಸಿ.

*ಕಲ್ಲುಪ್ಪನ್ನು ಬಳಸಿ ಆಲೂಗಡ್ಡೆಯ ಸ್ವಾದವನ್ನು ಕಡಿಮೆ ಮಾಡಬಹುದು. ಕಲ್ಲುಪ್ಪು ಮಿಶ್ರಣ ಮಾಡಿದ ನೀರಿನಲ್ಲಿ ಆಲೂಗಡ್ಡೆಯನ್ನು ನೆನೆಸಿಡಿ.

*ಆಲೂಗಡ್ಡೆ ಸಿಹಿಯನ್ನು ಕಡಿಮೆ ಮಾಡಲು ಸಿಟ್ರಸ್ ಪದಾರ್ಥಗಳನ್ನು ಬಳಸಬಹುದು. ಹಾಗಾಗಿ ಆಲೂಗಡ್ಡೆಯಿಂದ ಅಡುಗೆ ತಯಾರಿಸುವಾಗ ಕಿತ್ತಳೆ, ನಿಂಬೆ, ಮೊಸರನ್ನು ಮಿಕ್ಸ್ ಮಾಡಿದರೆ ಆಲೂಗಡ್ಡೆಯ ಸ್ವಾದ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read