Video | ಮನುಷ್ಯರೊಂದಿಗೆ ವಾಲಿಬಾಲ್ ಆಡುವ ನಾಯಿಯ ಕೌಶಲ್ಯಕ್ಕೆ ನೀವು ಫಿದಾ ಆಗೋದು ಗ್ಯಾರಂಟಿ

ಮನುಷ್ಯನೊಂದಿಗೆ ಸಾಕು ನಾಯಿಗಳು ವಿಶೇಷ ಬಾಂಧವ್ಯ ಹೊಂದಿರುತ್ತವೆ. ಅದರಲ್ಲೂ ನಾಯಿಗಳಿಗೆ ಕೆಲ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರಂತೂ ಅವು ಮನುಷ್ಯರನ್ನೂ ಮೀರಿಸುತ್ತವೆ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹುಬ್ಬೇರಿಸುವಂತೆ ಮಾಡಿದೆ.

ನಾಯಿ ಮನುಷ್ಯರ ಜೊತೆ ವಾಲಿಬಾಲ್ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ಕ್ಲಿಪ್‌ನಲ್ಲಿ ನಾಯಿ, ಓರ್ವ ವ್ಯಕ್ತಿಯೊಂದಿಗೆ ಒಂದು ತಂಡವಾಗಿ ಆಟ ಆಡಿದೆ.

ಎದುರುಬದಿಯ ಇಬ್ಬರು ವ್ಯಕ್ತಿಗಳು ಒಂದು ತಂಡವಾಗಿ ಆಟವಾಡಿದರೆ ಮತ್ತೊಂದು ಕಡೆ ಓರ್ವ ವ್ಯಕ್ತಿ ಮತ್ತು ನಾಯಿ ಮತ್ತೊಂದು ತಂಡವಾಗಿ ವಾಲಿಬಾಲ್ ಆಡಿದ್ದಾರೆ. ಆಟದ ಸಮಯದಲ್ಲಿ ನಾಯಿಯ ಉತ್ಸಾಹ, ಚೆಂಡನ್ನು ಎಸೆಯುವ ಮತ್ತು ಸ್ವೀಕರಿಸುವ ಕೌಶಲ್ಯ, ಎದುರಾಳಿಗಳ ಆಟವನ್ನ ಗಮನಿಸುವುದೆಲ್ಲವೂ ಗಮನ ಸೆಳೆಯುತ್ತದೆ. ಆಟಕ್ಕೆ ನಾಯಿ ಉತ್ತಮವಾಗಿ ಹೊಂದಿಕೊಂಡಿರುವಂತೆ ಕಾಣುತ್ತದೆ. ನಾಯಿಯ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು ವಾಹ್ ಎಂದಿದ್ದಾರೆ.

https://twitter.com/buitengebieden/status/1670721193358376966?ref_src=twsrc%5Etfw%7Ctwcamp%5Etweetembed%7Ctwterm%5E1670721193358376966%7Ctwgr%5E5b51d6263b990a2823d05f4fb7dc592e9fbfa44c%7Ctwcon%5Es1_&ref_url=https%3A%2F%2Fsports.ndtv.com%2Fothersports%2Fso-cute-viral-video-of-dog-playing-footvolley-melts-internet-watch-4134283

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read