ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಹೊತ್ತಲ್ಲೇ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬೆಳಗ್ಗೆಯೇ ಶಾಕ್ ಕಾದಿತ್ತು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಚೇರಿಗೆ ಭೇಟಿ ನೀಡಿದ ವೇಳೆ ಹಾವು ಕಾಣಿಸಿಕೊಂಡಿತ್ತು.
ಬೊಮ್ಮಾಯಿ ಬಿಜೆಪಿ ಕಚೇರಿ ಆವರಣದಲ್ಲಿ ಬಂದಾಗ ಹಾವೊಂದು ಕಾಣಿಸಿಕೊಂಡಿತು. ಹಾವು ಕಾಣಿಸಿಕೊಂಡ ನಂತರ ಬಿಜೆಪಿ ಕಚೇರಿ ಆವರಣದಲ್ಲಿ ನೆರೆದಿದ್ದ ಜನರಲ್ಲಿ ಗದ್ದಲ ಉಂಟಾಯಿತು.
ನಂತರ ಹಾವನ್ನು ಸೆರೆಹಿಡಿದು ಕಟ್ಟಡದ ಕಾಂಪೌಂಡ್‌ಗೆ ಭದ್ರತೆ ಒದಗಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸದ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಅವರ ತವರು ಜಿಲ್ಲೆಯಲ್ಲಿ ಶಿಗ್ಗಾಂವಿ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿದೆ.
https://twitter.com/ANI/status/1657232022476296193?ref_src=twsrc%5Etfw%7Ctwcamp%5Etweetembed%7Ctwterm%5E1657232022476296193%7Ctwgr%5E69041c1612063bc3957cbba6af72080b892870a8%7Ctwcon%5Es1_&ref_url=https%3A%2F%2Fwww.latestly.com%2Fsocially%2Findia%2Fnews%2Fsnake-found-in-bjp-office-in-karnataka-snake-seen-slithering-away-at-bjp-office-in-shiggaon-when-cm-basavaraj-bommai-arrives-captured-later-watch-video-5123575.html