ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಹಾವು ಹಾಗೂ ಸರಿಸೃಪಗಳನ್ನು ಸಾಗಾಟ ಮಾಡುತ್ತಿದ್ದ ಓರ್ವ ಪ್ರಯಾಣಿಕನನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಯಾಣಿಕನೊಬ್ಬ ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಈತನ ಲಗೇಜ್ ಬ್ಯಾಗ್ ಪರಿಶೀಲಿಸಿದಾಗ ಹಾವು ಸೇರಿದಂತೆ ಇತರೆ ಸರಿಸೃಪಗಳು ಪತ್ತೆಯಾಗಿವೆ. ತಕ್ಷಣ ಅವುಗಳನ್ನು ಜಪ್ತಿ ಮಾಡಿ, ಪ್ರಯಾಣಿಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಸಧ್ಯ ಜಪ್ತಿ ಮಾಡಲಪಟ್ಟ ಹಾವು, ಸರಿಸೃಪಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಪ್ರಯಾಣಿಕ ವಿದೇಶದಿಂದ ಇವುಗಳನ್ನು ಅಕ್ರಮವಾಗಿ ತಂದಿದ್ದ ಎಂದು ತಿಳಿದುಬಂದಿದೆ.