ʼಸ್ಮಾರ್ಟ್ ಶಾಪಿಂಗ್ʼ ಮಾಡಿದ್ರೆ ಉಳಿಸಬಹುದು ಹಣ

ಉಳಿತಾಯ ಎನ್ನುವುದು ದುಡಿಮೆಯ ಮತ್ತೊಂದು ಮುಖ. ನೀವು ತಿಂಗಳಿಗೆ ಎಷ್ಟು ದುಡಿಯುತ್ತೀರೋ ಅದರಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಿ.

ಗಗನಕ್ಕೇರುತ್ತಿರುವ ಬೆಲೆಯ ಕಾರಣದಿಂದ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿರುತ್ತದೆ. ಇನ್ನು ಉಳಿತಾಯದ ಮಾತೆಲ್ಲಿ ಎಂದಿರಾ ಅದಕ್ಕೊಂದು ಪರಿಹಾರವಿದೆ. ಕೆಲವು ಉಪಾಯಗಳನ್ನು ಅಳವಡಿಸಿಕೊಂಡರೆ ನಿಮ್ಮ ದುಡಿಮೆಯ ಒಂದು ಭಾಗವನ್ನು ಉಳಿತಾಯ ಮಾಡಬಹುದು.

ಚೀಪ್ ಶಾಪಿಂಗ್ ಮಾಡಬೇಡಿ. ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗುತ್ತವೆ ಎಂದು ಶಾಪಿಂಗ್ ಮಾಡಲು ಹೋಗಬೇಡಿ. ಸ್ಮಾರ್ಟ್ ಶಾಪಿಂಗ್ ಮಾಡಿ. ಶಾಪಿಂಗ್ ಮಾಡುವ ಮುನ್ನ ನಿಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಮಾಡಿ ಅತ್ಯಗತ್ಯವಾದುದನ್ನು ಮಾತ್ರ ಒಂದೊಂದೇ ಖರೀದಿ ಮಾಡಿ.

ಸಾಲ ಮಾಡಬೇಡಿ. ಮಾಡಿದರೂ ಬೇಗ ತೀರಿಸಿಬಿಡಿ. ಒಳ್ಳೆಯ ಪ್ಲಾನ್ ಮಾಡಿ. ನಿಮ್ಮ ಹಣವನ್ನು ಇನ್ವೆಸ್ಟ್ ಮಾಡಿ. ದುಂದು ವೆಚ್ಚ ಮಾಡದೆ ಸಂಗಾತಿ ಜೊತೆ ವ್ಯವಹಾರಿಕ ಚರ್ಚೆ ಮಾಡಿ ಬಜೆಟ್ ಪ್ಲಾನ್ ಮಾಡಿ.

ಈಗ ಆನ್‌ ಲೈನ್‌ ಶಾಪಿಂಗ್‌ ವ್ಯವಸ್ಥೆಯಿಂದ ಕಣ್ಣಿಗೆ ಕಂಡಿದ್ದೆಲ್ಲದರ ಖರೀದಿಗೆ ಯುವ ಜನತೆ ಮುಂದಾಗುತ್ತಾರೆ, ಅವರಿಗೂ ತಿಳಿ ಹೇಳಿ ಉಳಿತಾಯದ ಪಾಠ ಹೇಳಿ ಕೊಡಿ. ಅವಶ್ಯಕ ಎನಿಸುವ ವಸ್ತುಗಳನ್ನು ಮಾತ್ರ ಶಾಪಿಂಗ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read