ನವದೆಹಲಿ: ಜಿಎಸ್‌ಟಿ ಸುಧಾರಣೆಗಳು ಜಾರಿಗೆ ಬರುತ್ತಿದ್ದಂತೆ ಸಣ್ಣ ಕಾರುಗಳು, 350 ಸಿಸಿ ವರೆಗಿನ ಬೈಕ್‌ಗಳು ಅಗ್ಗವಾಗಲಿವೆ.
ಜಿಎಸ್‌ಟಿ ಕೌನ್ಸಿಲ್ ಬುಧವಾರ ಜಟಿಲಗೊಂಡ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆಡಳಿತದ ಸಂಪೂರ್ಣ ಪರಿಷ್ಕರಣೆಗೆ ಅನುಮೋದನೆ ನೀಡಿರುವುದರಿಂದ ಸಣ್ಣ ಕಾರುಗಳು ಮತ್ತು ಆರಂಭಿಕ ಹಂತದ ಬೈಕ್‌ಗಳು ಅಗ್ಗವಾಗಲಿವೆ.
ಜಿಎಸ್‌ಟಿ ಕೌನ್ಸಿಲ್ ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವಂತೆ ಶೇ. 5 ಮತ್ತು ಶೇ. 18 ಕ್ಕೆ ಸೀಮಿತಗೊಳಿಸುವ ಸ್ಲ್ಯಾಬ್‌ಗಳನ್ನು ಅನುಮೋದಿಸಿದೆ.
1,200 ಸಿಸಿಗಿಂತ ಕಡಿಮೆ ಮತ್ತು 4,000 ಎಂಎಂ ಗಿಂತ ಹೆಚ್ಚಿಲ್ಲದ ಪೆಟ್ರೋಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ವಾಹನಗಳು ಮತ್ತು 1,500 ಸಿಸಿ ಮತ್ತು 4,000 ಎಂಎಂ ಉದ್ದದ ಡೀಸೆಲ್ ವಾಹನಗಳು ಪ್ರಸ್ತುತ ಶೇ. 28 ರಿಂದ ಶೇ. 18 ಕ್ಕೆ ಬರಲಿವೆ.