ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತದಿಂದ ಪಾರು; ಬೆಚ್ಚಿಬೀಳಿಸುತ್ತೆ ವಿಡಿಯೋ

ಬಸ್ ಡಿಕ್ಕಿ ಹೊಡೆದ ನಂತರ ಕಾರೊಂದು ದೊಡ್ಡ ಅನಾಹುತದಿಂದ ಪಾರಾಗಿರುವ ಘಟನೆ ಜನರನ್ನ ಅಚ್ಚರಿಗೊಳಿಸಿದ್ದು ಬೆಚ್ಚಿಬೀಳಿಸಿದೆ. ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ವೈರಲ್ ಆಗುತ್ತಿವೆ. ವೀಡಿಯೋದಲ್ಲಿ ಬಸ್ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸುತ್ತದೆ.

ಈ ಘರ್ಷಣೆಯಿಂದ ಕಾರು ಮುಂದಕ್ಕೆ ಚಲಿಸುತ್ತದೆ. ಈ ವೇಳೆ ದೊಡ್ಡ ಅನಾಹುತವೇ ಆಗಬೇಕಿತ್ತು. ಆದರೆ ನಂತರ ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವ ಬದಲು, ಕಾರು ನಿಯಂತ್ರಣವನ್ನು ಪಡೆದುಕೊಂಡು ಪೂರ್ಣ ಯು ಟರ್ನ್ ಪಡೆದು ನಿಲ್ಲುತ್ತದೆ.

ಕಾರು ರಸ್ತೆಯಲ್ಲಿ ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಮೀಪಕ್ಕೆ ಬಂದರೂ ಯಾವುದೇ ಡಿಕ್ಕಿಯಿಲ್ಲದೆ ಪಾರಾಗುತ್ತದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಜ್ಚಪರಂಬು ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಚಾಲಕ ನುರಿತವನೋ ಅಥವಾ ಅದೃಷ್ಟಶಾಲಿಯೋ ಎಂಬ ಚರ್ಚೆಯನ್ನ ವೀಡಿಯೊ ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read