ವಿಕಲಚೇತನರಿಗೆ ಕೌಶಲ್ಯಾಭಿವೃದ್ದಿ ತರಬೇತಿ

ದಾವಣಗೆರೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವತಿಯಿಂದ ವಿಕಲಚೇತನ ಯುವಕ, ಯುವತಿಯರು, ಸ್ವಯಂ ಉದ್ಯೋಗ ಕೈಗೊಳ್ಳುವ ಅಥವಾ ಬೇರೆ ಕಡೆ ಹೋಗಿ ಉದ್ಯೋಗ ಮಾಡಲು ನೆರವಾಗುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.

18 ರಿಂದ 40 ವರ್ಷದ ವಯೋಮಾನದ ವಿಕಲಚೇತನರು ಕಂಪ್ಯೂಟರ್ (ಡಾಟ ಎಂಟ್ರಿ ಆಪರೇಟರ್) ತರಬೇತಿ, ಮೊಬೈಲ್ ರಿಪೇರಿ, ತೋಟಗಾರಿಕೆ, ನರ್ಸರಿ (ಗಿಡ ಬೆಳೆಸುವುದು), ಬಿಸಿನೆಸ್ ಪ್ರೋಸೆಸ್ ಔಟ್‍ಸೊರ್ಸಿಂಗ್, ಬ್ಯೂಟೀಷಿಯನ್, ಟೈಲರಿಂಗ್, ಹೈನುಗಾರಿಕೆ, ಹೋಂ ನರ್ಸಿಂಗ್ (ಗೃಹ ಶುಶ್ರೂಷಕರು), ಹೋಂ ಅಪ್ಲೈಯನ್ಸಸ್ ರಿಪೇರ್ ಅರ್ಜಿ ಸಲ್ಲಿಸಬಹುದು.

ಗರಿಷ್ಠ 2 ವಿಷಯಗಳನ್ನು ಮಾತ್ರ ಆಯ್ಕೆ ಮಾಡುವುದು ಹಾಗೂ ತರಬೇತಿ ಅವಧಿಯಲ್ಲಿ ಊಟ, ವಸತಿ, ಉಚಿತವಾಗಿ ನೀಡಲಾಗುವುದು. ಆದ್ದರಿಂದ ಆಸಕ್ತಿ ಇರುವ ನಿರುದ್ಯೋಗಿ ವಿಕಲಚೇತನರ ಮಾಹಿತಿಯನ್ನು ಮೇ.25 ರೊಳಗಾಗಿ ಸಲ್ಲಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read