ಹಾಡಹಗಲೇ ಬೆಚ್ಚಿ ಬೀಳಿಸುವ ಘಟನೆ: ದಶಕದ ಸೇಡಿಗಾಗಿ ಒಂದೇ ಕುಟುಂಬದ 6 ಮಂದಿ ಹತ್ಯೆ

ಭೋಪಾಲ್: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಒಂದು ಕುಟುಂಬದ ಮೂವರು ಪುರುಷರು ಮತ್ತು ಮೂವರು ಮಹಿಳೆಯರನ್ನು ರೈಫಲ್ ಹಿಡಿದ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅವರು ದಶಕದ ಹಿಂದೆ ತಮ್ಮ ಕುಟುಂಬ ಸದಸ್ಯರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಹೋನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊರೆನಾದ ಲೆಪಾ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಹತ್ಯೆಯ ದೃಶ್ಯಗಳು ಸೆರೆಯಾಗಿವೆ. ರೈಫಲ್ ಹಿಡಿದ ವ್ಯಕ್ತಿ ಗುಂಡು ಹಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಕುಟುಂಬದ ಮಹಿಳೆಯರು ದಾಳಿಕೋರನ ಮೇಲೆ ಕೋಲುಗಳನ್ನು ಎಸೆದು ಅವನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ಫೈರಿಂಗ್ ಮಾಡಿದ್ದಾನೆ.

ರೈಫಲ್ ಹಿಡಿದ ವ್ಯಕ್ತಿಯೊಂದಿಗೆ ಇನ್ನೊಬ್ಬ ದಾಳಿಕೋರ ಕೋಲು ಹಿಡಿದುಕೊಂಡು ಓಡಿಹೋಗಿದ್ದಾನೆ. ಇತರ ಆರೋಪಿಗಳೂ ಪರಾರಿಯಾಗಿದ್ದಾರೆ. ಸುಮಾರು 2-3 ಜನರನ್ನು ಬಂಧಿಸಲಾಗಿದೆ ಮತ್ತು ಪರಾರಿಯಾಗಿರುವವರನ್ನು ಬಂಧಿಸಲು ತಂಡಗಳನ್ನು ಕಳುಹಿಸಲಾಗಿದೆ ಎಂದು ಎಎಸ್ಪಿ(ಮೊರೆನಾ) ರೈಸಿಂಗ್ ನರ್ವಾರಿಯಾ ತಿಳಿಸಿದರು.

ನಾವು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ. ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 2014ರಲ್ಲಿ ನಡೆದ ಕೊಲೆಯೊಂದರ ಕುರಿತು ಎರಡು ಕುಟುಂಬಗಳ ನಡುವೆ ದೀರ್ಘಕಾಲದ ದ್ವೇಷವಿತ್ತು. ಗುಂಡಿನ ದಾಳಿಯಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಸಾವನ್ನಪ್ಪಿದ್ದಾರೆ ಎಂದು ಎಎಸ್ಪಿ ನರ್ವಾರಿಯಾ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಕೊಲೆ ಪ್ರಕರಣದ ಹೊರತಾಗಿ, ಧೀರ್ ಸಿಂಗ್ ಮತ್ತು ಗಜೇಂದ್ರ ಸಿಂಗ್ ಕುಟುಂಬಗಳ ನಡುವೆ ಹಳೆಯ ಆಸ್ತಿ ವಿವಾದವಿತ್ತು. 2013 ರಲ್ಲಿ, ಧೀರ್ ಸಿಂಗ್ ಅವರ ಕುಟುಂಬದ ಇಬ್ಬರು ಜನರನ್ನು ಹತ್ಯೆ ಮಾಡಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read