ಡೆಹ್ರಾಡೂನ್: ಶುಕ್ರವಾರ ಮುಂಜಾನೆ ಉತ್ತರಾಖಂಡದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಮೇಘಸ್ಫೋಟದ ಸರಣಿಯಿಂದಾಗಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಕಾಣೆಯಾಗಿದ್ದಾರೆ, ಭೂಕುಸಿತ ಪ್ರವಾಹದಿಂದ ಮನೆಗಳಿಗೆ ಹಾನಿಯಾಗಿ ಜನ ಅವಶೇಷಗಳ ರಾಶಿಯ ಕೆಳಗೆ ಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 23 ರಂದು ಥರಾಲಿ ವಿಪತ್ತಿನ ನಂತರ ಸಂಭವಿಸಿದ ನೈಸರ್ಗಿಕ ವಿಕೋಪದ ತೀವ್ರತೆಯನ್ನು ಚಮೋಲಿ, ರುದ್ರಪ್ರಯಾಗ, ತೆಹ್ರಿ ಮತ್ತು ಬಾಗೇಶ್ವರ ಜಿಲ್ಲೆಗಳು ಅನುಭವಿಸಿವೆ. ಈ ಮಳೆಗಾಲದಲ್ಲಿ ಉತ್ತರಾಖಂಡವು ನೈಸರ್ಗಿಕ ವಿಕೋಪಗಳಿಂದ ತೀವ್ರವಾಗಿ ತತ್ತರಿಸಿದೆ. ಉತ್ತರಾಖಂಡದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಮೇಘಸ್ಫೋಟದದಿಂದ ಜನ ತತ್ತರಿಸಿದ್ದಾರೆ. ಹಲವು ಕಡೆ ಸಂಪರ್ಕ ಕಡಿತಗೊಂಡಿದೆ. ಅವಶೇಷಗಳಡಿ ಸಿಲುಕಿದವರು, ಮೃತರ ಹುಡುಕಾಟ ನಡೆದಿದೆ.