SHOCKING: ಡ್ಯಾನ್ಸ್ ವೇಳೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಹಾಸ್ಯ ನಟ ‘ಸಿಂಗಾಪುರ ಶಿವಾಜಿ’ | ವಿಡಿಯೋ ವೈರಲ್

‘ಸಿಂಗಾಪುರ ಶಿವಾಜಿ’ ಎಂದೇ ಖ್ಯಾತರಾಗಿದ್ದ ಹಾಸ್ಯ ನಟ ಅಶೋಕನ್ ಮುನಿಯಾಂಡಿ ಸಮಾರಂಭವೊಂದರಲ್ಲಿ ವೇದಿಕೆ ಮೇಲೆ ಕಾರ್ಯಕ್ರಮ ನೀಡುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

60 ವರ್ಷದ ಅಶೋಕನ್ ಮುನಿಯಾಂಡಿ ತಮಿಳು ಹಾಸ್ಯ ನಟ, ಮಿಮಿಕ್ರಿ ಕಲಾವಿದರಾಗಿ ಹೆಸರು ಮಾಡಿದ್ದಾರೆ. ಅವರು ವೇದಿಕೆ ಮೇಲೆ ಹೃದಯಘಾತದಿಂದ ಮೃತಪಟ್ಟಿದ್ದು ವಿಡಿಯೋ ವೈರಲ್ ಆಗಿದೆ.

ಶಿವಾಜಿ ಗಣೇಶನ್ ಅವರಂತೆ ಕಾಣುವ ಅಶೋಕನ್ ಅವರು ಲೈವ್ ಸ್ಟೇಜ್ ಪ್ರದರ್ಶನದ ವೇಳೆಯಲ್ಲೇ ಕುಸಿದುಬಿದ್ದು ನಿಧನರಾಗಿದ್ದಾರೆ. ಅವರು ಖ್ಯಾತ ನಟ ಶಿವಾಜಿ ಗಣೇಶನ್ ಅವರನ್ನು ಅನುಕರಿಸುವ ಮೂಲಕ ಪ್ರಸಿದ್ಧರಾಗಿದ್ದರು. ಅಶೋಕನ್, ಅಕಾ ಸಿಂಗಾಪುರ್ ಶಿವಾಜಿ, ಅಕ್ಟೋಬರ್ 12 ರ ಶನಿವಾರದಂದು ಕೊನೆಯುಸಿರೆಳೆದಿದ್ದಾರೆ.

ಅಶೋಕನ್ ಅವರು ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಸಂತಾಪಗಳ ಮಹಾಪೂರವೇ ಹರಿದು ಬಂದಿದೆ.

ಅಶೋಕನ್ ಅವರು ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ಸಮುದಾಯ ಮತ್ತು ದತ್ತಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಶಿವಾಜಿ ಗಣೇಶನ್ ಅವರನ್ನು ಸಂಪೂರ್ಣವಾಗಿ ಅನುಕರಿಸುತ್ತಿದ್ದರು.

https://twitter.com/RSBHAT/status/1845483661086339472

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read