ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಸೀತಾಫಲʼ

ಅಪಾರ ವಿಟಮಿನ್-ಸಿ ಇರುವ ಹಣ್ಣು ಸೀತಾಫಲ. ಎಲ್ಲಾ ಕಾಲದಲ್ಲೂ ಈ ಹಣ್ಣು ಸಿಗುವುದಿಲ್ಲ. ದೊರಕುವಾಗ ದಿನಕ್ಕೆ ಒಂದು ಹಣ್ಣು ತಿನ್ನುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಬೇರೆ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣಿನಲ್ಲಿ ಕ್ಯಾಲೋರಿ ಹೆಚ್ಚು. ಇದರ ಇನ್ನಿತರ ಉಪಯೋಗಗಳು ಇಲ್ಲಿವೆ.

* ಹೃದಯ, ಎಲುಬು, ಚರ್ಮ ರಕ್ಷಣೆಗೆ ಸೀತಾಫಲ ಒಳ್ಳೆಯದು. ಇದರಲ್ಲಿರುವ ಪೊಟ್ಯಾಶಿಯಂ ಹೃದಯಬೇನೆ, ಪಾರ್ಶ್ವವಾಯು ಬರದಂತೆ ನೋಡಿಕೊಳ್ಳುತ್ತದೆ.

* ಕ್ರಮವಾಗಿ ಈ ಹಣ್ಣು ಸೇವಿಸುವವರಲ್ಲಿ ಕೀಲುನೋವು, ಆರ್ಥ್ರೈಟಿಸ್ ಬರುವ ಸಾಧ್ಯತೆ ಕಮ್ಮಿ. ಇದು ನೋವು ನಿವಾರಕ ಮತ್ತು ಹೊಟ್ಟೆಯಲ್ಲಿನ ಅಲ್ಸರ್ ಅನ್ನು ಗುಣಪಡಿಸುತ್ತದೆ.

* ಇದರಲ್ಲಿನ ನಾರು ಸತ್ವ ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಕೊಲೆಸ್ಟ್ರಾಲ್ ತಗ್ಗಿಸಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

* ಇದರಲ್ಲಿ ವಿಟಮಿನ್ ಎ ಅಧಿಕವಾಗಿರುತ್ತದೆ. ಇದು ದೃಷ್ಟಿ ಸ್ಪಷ್ಟತೆಗೆ ಸಹಾಯಕವಾಗಿದೆ.

* ಗರ್ಭಿಣಿಯರಿಗೆ ಇದೊಂದು ಉತ್ತಮ ಆಹಾರ. ವಾಂತಿ, ವಿಕಾರ, ರಕ್ತಹೀನತೆ ಇತ್ಯಾದಿಯನ್ನು ಹೋಗಲಾಡಿಸುತ್ತದೆ. ಮಲಬದ್ಧತೆ ಸಮಸ್ಯೆಗೂ ಪರಿಹಾರ ನೀಡುತ್ತದೆ.

* ಇದರಲ್ಲಿನ ಫಿನಾಲಿಕ್ ಪದಾರ್ಥ ಒಳ್ಳೆಯ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read