ಸಾವಿನಲ್ಲೂ ಒಂದಾದರು ಒಂದೇ ದಿನ ಒಬ್ಬನನ್ನೇ ಮದುವೆಯಾಗಿ ಜೊತೆಯಾಗಿದ್ದ ಸಹೋದರಿಯರು

ಬಾಗಲಕೋಟೆ: ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿ ಅದೇ ಊರಿನ ವ್ಯಕ್ತಿಯನ್ನು ಒಂದೇ ದಿನ ಮದುವೆಯಾಗಿ ಜೀವನದಲ್ಲಿ ಒಟ್ಟಿಗೆ ಇದ್ದ ಸಹೋದರಿಯರು ಒಂದೇ ದಿನ ಮೃತಪಟ್ಟ ಅಪರೂಪದ ಘಟನೆ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಬುಧವಾರ ನಡೆದಿದೆ.

90 ವರ್ಷದ ಕಿಟ್ಟವ್ವ, 84 ವರ್ಷದ ಕಾಶಿಬಾಯಿ ಮೃತಪಟ್ಟ ಸಹೋದರಿಯರು. ಇವರು ತುಂಗಳ ಗ್ರಾಮದ ಹನುಮಂತ ಗೊಲಬಾವಿ ಅವರನ್ನು ಒಂದೇ ದಿನ ಮದುವೆಯಾಗಿದ್ದರು. ಕಿಟ್ಟವ್ವ ಅವರಿಗೆ ಒಬ್ಬ ಪುತ್ರ, ಕಾಶಿಬಾಯಿಯವರಿಗೆ ನಾಲ್ವರು ಪುತ್ರಿಯರು ಇದ್ದಾರೆ. ಕೆಲವು ವರ್ಷಗಳ ಹಿಂದೆ ಹನುಮಂತ ಗೊಲಬಾವಿ ನಿಧನರಾಗಿದ್ದರು.

ಸಹೋದರಿಯರಿಬ್ಬರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 15 ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಬೆಳಗ್ಗೆ 7:30ಕ್ಕೆ ಕಾಶಿಬಾಯಿ, 9:30ಕ್ಕೆ ಕಿಟ್ಟವ್ವ ನಿಧನರಾಗಿದ್ದು, ಬುಧವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read