ಮೈಸೂರು: ಸ್ನಾನ ಮಾಡುವ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಅಕ್ಕ, ತಂಗಿ ಮೃತಪಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.
ಗುಲ್ಪಾರ್ಮ್(23), ಸಿಮ್ರಾನ್ ತಾಜ್(20) ಮೃತಪಟ್ಟವರು. ಅಕ್ಕ,ತಂಗಿಯರಾದ ಇಬ್ಬರೂ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದು, ಬಹಳ ಹೊತ್ತಿನವರೆಗೂ ಹೊರಗೆ ಬಂದಿಲ್ಲ. ಅನುಮಾನಗೊಂಡ ಅವರ ತಂದೆ ಅಲ್ತಾಫ್ ಅವರು ಬಾಗಿಲು ಬಡಿದಿದ್ದಾರೆ. ಆಗ ಬಾಗಿಲು ತೆಗೆದಿಲ್ಲ. ಕೊನೆಗೆ ಬಾಗಿಲು ತೆಗೆದು ನೋಡಿದಾಗ ಮಕ್ಕಳಿಬ್ಬರೂ, ಅರೆಪ್ರಜ್ಞಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಈ ವೇಳೆಗೆ ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
