ಕುಡಿದ ಅಮಲಿನಲ್ಲಿ ನಿಶ್ಚಿತ ವಧುವಿನೊಂದಿಗೆ ಖ್ಯಾತ ಗಾಯಕನ ಅನುಚಿತ ವರ್ತನೆ: ಶಾಕಿಂಗ್ ವಿಡಿಯೋ ವೈರಲ್​

ಅಮೆರಿಕದ ಗಾಯಕ ಹಾಗೂ ಗೀತರಚನೆಕಾರ ರಾಬಿನ್​ ಥಿಕ್​​ ತಮ್ಮ ದುರ್ವರ್ತನೆ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ . ಗಾಯಕ ರಾಬಿನ್​ ಥಿಕ್​​​ ತಮ್ಮ ನಿಶ್ಚಿತ ವಧು ಏಪ್ರಿಲ್ ಲವ್ ಗೇರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ವೆಸ್ಟ್​ ಹಾಲಿವುಡ್​​ ಬಾರ್​​ ಹೊರಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇಲ್ಲಿ ಇವರಿಬ್ಬರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಟ್ವಿಟರ್​​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲವ್​ ಗೇರಿ ತನ್ನನ್ನು ಒಬ್ಬಂಟಿಯಾಗಿ ಇರಲು ಬಿಡುವಂತೆ ರಾಬಿನ್ ಥಿಕ್​ ಬಳಿ ಹೇಳುತ್ತಿರೋದನ್ನು ಕಾಣಬಹುದಾಗಿದೆ. ಈ ವಿಡಿಯೋ ಶೇರ್​ ಮಾಡಿರುವ ಅಭಿಮಾನಿಯು, ಈ ಘಟನೆ ನೋಡಿ ನಾನು ಶಾಕ್​​ ಆಗಿದ್ದೇನೆ. ರಾಬಿನ್​ ಥಿಕ್​ ಈ ರೀತಿ ವರ್ತಿಸುತ್ತಿದ್ದರೂ ಸಹ ಯಾರೂ ಮಧ್ಯ ಪ್ರವೇಶಿಸಲಿಲ್ಲ. ಓರ್ವ ಪುರುಷ ಈ ರೀತಿ ಸಾರ್ವಜನಿಕವಾಗಿ ಮಹಿಳೆಯನ್ನು ಎಳೆದಾಡುವುದು ಕ್ಷಮಿಸಲು ಅಸಾಧ್ಯ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ರಾಬಿನ್​ ಥಿಕ್​​ ಅವರ ನಡತೆಯನ್ನು ಬೇಜಾವಾಬ್ದಾರಿ ನಡೆ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಮಹಿಳೆಯರು ಸ್ಟ್ರಾಂಗ್​ ಆಗಿರಬೇಕು ಅಂತಾ ಅಭಿಪ್ರಾಯ ಹೊರಹಾಕಿದ್ದಾರೆ.

https://twitter.com/i/status/1700254411501851060

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read