ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಅಪ್ರಾಪ್ತ ಮಕ್ಕಳ ಮುಂದೆಯೇ ಥಳಿಸಿ ಕೊಂದಿದ್ದು, ಭಯಾನಕ ವೀಡಿಯೋ ವೈರಲ್ ಆಗಿದೆ.
ಜಿಲ್ಲೆಯ ಮೋತಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಿಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಆರೋಪಿಯನ್ನು ಮೊಹಮ್ಮದ್ ಕಲೀಮುಲ್ಲಾ ಅಲಿಯಾಸ್ ಮುನ್ನಾ ಎಂದು ಗುರುತಿಸಲಾಗಿದೆ.ಕಲೀಮುಲ್ಲಾ ತನ್ನ ಎರಡನೇ ಪತ್ನಿ ಮೆಹರುಹಾನಿಶಾಳನ್ನು ಸಾಯುವವರೆಗೂ ಕೋಲಿನಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆಯು ಅವರ ಮಕ್ಕಳಾದ ಸಮೀರ್ ಮತ್ತು ಸಲ್ಮಾನ್ ಅವರ ಮುಂದೆ ನಡೆದಿದ್ದು, ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರೋಪಿಯು ಎಷ್ಟು ಕೋಪಗೊಂಡಿದ್ದನೆಂದರೆ ಮಹಿಳೆಯ ಸಾವಿನ ನಂತರವೂ ಆತ ಹೊಡೆಯುವದನ್ನು ನಿಲ್ಲಿಸಲಿಲ್ಲ.
ಸಂತ್ರಸ್ತೆಯನ್ನು ಪತಿಯಿಂದ ರಕ್ಷಿಸಲು ಗ್ರಾಮದಲ್ಲಿ ಯಾರೂ ಮುಂದೆ ಬರದ ಕಾರಣ ಮಕ್ಕಳ ಸಹಾಯಕ್ಕಾಗಿ ಕೂಗಿಗೆ ಉತ್ತರಿಸಲಾಗಲಿಲ್ಲ.ಕಲೀಮುಲ್ಲಾ ಅವರ ಮೊದಲ ಪತ್ನಿ ತೀರಿಕೊಂಡಿದ್ದರೆ, ಮೆಹರುಹಾನಿಶಾ ಅವರ ಎರಡನೇ ಪತ್ನಿಯಾಗಿದ್ದರು.
मुजफ्फरपुर: बच्चों के सामने पत्नी की हत्या, मौत के बाद भी पीटता रहा पति#Muzaffarpur #Bihar pic.twitter.com/Me8o4bmT6O
— newster 7 media (@newster7media) April 13, 2025