ಎರಡು ಚಿತ್ರಗಳ ಹೀರೋಗಳಿಗೆ ಒಂದೇ ಔಟ್‌ಫಿಟ್….?

ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚಿನ ಚಿತ್ರಗಳಲ್ಲಿ ನಟರು ಒಂದೇ ರೀತಿಯ ವಸ್ತ್ರಗಳನ್ನು ಧರಿಸುವುದು ಸಾಮಾನ್ಯ ವಿಚಾರವಾಗಿಬಿಟ್ಟಿದೆ. ಈ ಹಿಂದೆಲ್ಲಾ ಒಂದೊಂದು ಚಿತ್ರಕ್ಕೂ ಥರಾವರಿ ಬಟ್ಟೆಗಳನ್ನು ಹಾಕುತ್ತಿದ್ದರು ನಟರು.

ಬಹಳಷ್ಟು ನಟಿಯರು ಈ ದಿನಗಳಲ್ಲಿ ತಮ್ಮ ಅದದೇ ಬಟ್ಟೆಗಳಿಗೆ ಮರುವಿನ್ಯಾಸ ಮಾಡಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಲವ್ ರಂಜನ್‌ರ ಚಿತ್ರಗಳಲ್ಲಿ ಒಂದೇ ರೀತಿಯ ಬಟ್ಟೆಗಳಲ್ಲಿ ಹೇಗೆ ನಟರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಹೈಲೈಟ್ ಮಾಡಿ ತೋರಿಸಿದ್ದಾರೆ.

’ತೂ ಝೂಟೀ ಮೈ ಮಕ್ಕರ್‌’ ಹೆಸರಿನ ಚಿತ್ರವೊಂದರಲ್ಲಿ ರಣಬೀರ್‌ ಕಪೂರ್‌ ಅವರು ’ದೇ ದೇ ಪ್ಯಾರ್‌ ದೇ’ ಚಿತ್ರದಲ್ಲಿ ಅಜಯ್‌ ದೇವಗನ್ ಧರಿಸಿದ್ದ ಥರದ್ದೇ ಟೀಶರ್ಟ್ ಧರಿಸಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

’ಮೈ ಸಿನೆಮಾ ಸ್ಟೋರಿ’ ಹೆಸರಿನ ಈ ಪೇಜ್‌ನಲ್ಲಿ ಲವ್ ರಂಜನ್‌ರ ಚಿತ್ರಗಳಲ್ಲಿ ಕಾಸ್ಟ್ಯೂಮ್‌ಗಳ ಕುರಿತು ವಿಶ್ಲೇಷಣೆ ನೀಡಲಾಗಿದೆ. ಬಾಲಿವುಡ್ ನಟರು ಧರಿಸುವ ಔಟ್‌ಫಿಟ್‌ಗಳಲ್ಲಿ ಇರುವ ಸಾಮ್ಯತೆಗಳನ್ನು ಇದೇ ವಿಶ್ಲೇಷಣೆ ಸಂದರ್ಭದಲ್ಲಿ ಚರ್ಚಿಸಲಾಗಿದೆ.

https://youtu.be/T0tfD-kUNh0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read