ಅದೊಂದು ಭಾವನಾತ್ಮಕ ಕ್ಷಣ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಣ್ಣುಗಳು ಒದ್ದೆಯಾಗಿದ್ದವು. ಹೃದಯ ಪ್ರೀತಿ ಮತ್ತು ಗೌರವದಿಂದ ತುಂಬಿತ್ತು.
ತಮಿಳುನಾಡಿನ ಕೊಜಿಯಮುಟ್ಟಿ ಆನೆ ಶಿಬಿರದ ಅಪ್ರತಿಮ ಕುಮ್ಕಿ ಆನೆಯು ಮಂಗಳವಾರ 60 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿತು. ಈ ವೇಳೆ ಕಲೀಮ್ ಎಂಬ ಕುಮ್ಕಿ ಆನೆಯು ತಮಿಳುನಾಡು ಅರಣ್ಯ ಅಧಿಕಾರಿಗಳಿಂದ ಗೌರವ ರಕ್ಷೆಯನ್ನು ಸ್ವೀಕರಿಸಿತು.
ಕಲೀಮ್ ಇಲ್ಲಿಯವರೆಗೆ 99 ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿತ್ತು. ತಮಿಳುನಾಡು ಸರ್ಕಾರದ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಕಲೀಮ್ ಗೌರವ ವಂದನೆ ಸ್ವೀಕರಿಸುತ್ತಿರುವ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
“ತಮಿಳುನಾಡಿನ ಕೊಜಿಯಮುಟ್ಟಿ ಆನೆ ಶಿಬಿರದ ಕುಮ್ಕಿ ಆನೆ ಕಲೀಮ್ ಇಂದು 60 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದ್ದರಿಂದ ನಮ್ಮ ಕಣ್ಣುಗಳು ತೇವವಾಗಿವೆ ಮತ್ತು ಹೃದಯಗಳು ಕೃತಜ್ಞತೆಯಿಂದ ತುಂಬಿವೆ. ಕಲೀಮ್ 99 ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದ. ತಮಿಳುನಾಡು ಅರಣ್ಯ ಇಲಾಖೆಯಿಂದ ಗಾರ್ಡ್ ಆಫ್ ಹಾನರ್ ಗೌರವ ಸ್ವೀಕರಿಸಿದರು ” ಎಂದು ಟ್ವೀಟ್ ಮಾಡಿದ್ದಾರೆ.
https://twitter.com/supriyasahuias/status/1633071801449480194?ref_src=twsrc%5Etfw%7Ctwcamp%5Etweetembed%7Ctwterm%5E1633071801449480194%7Ctwgr%5E8468b8aa8ff8323f17c38503efeb1b23cd0d90cc%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fsight-to-behold-elephant-involved-in-99-rescue-operations-retires-at-60-watch-heart-warming-guard-of-honour