ಅತಿಯಾಗಿ ಬೆಳ್ಳುಳ್ಳಿ ಸೇವಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಳ್ಳುಳ್ಳಿಯನ್ನು ಭಾರತದಲ್ಲಿ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಔಷಧಿ ಗುಣವನ್ನೂ ಹೊಂದಿದೆ. ಪ್ರತಿ ದಿನ ಒಂದಲ್ಲ ಒಂದು ಆಹಾರದಲ್ಲಿ ಬೆಳ್ಳುಳ್ಳಿ ಸೇವನೆ ಮಾಡ್ತೆವೆ. ಕೆಲವರು ಹಸಿ ಬೆಳ್ಳುಳ್ಳಿ ಸೇವನೆ ಮಾಡ್ತಾರೆ. ಬೆಳ್ಳುಳ್ಳಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೆ ಅಪಾಯಕಾರಿ. ಅತಿ ಹೆಚ್ಚು ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ.

ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಫ್ರಕ್ಟಾನ್ಸ್‌ ಹೆಸರಿನ ಕಾರ್ಬೋಹೈಡ್ರೇಟ್‌ ಗಳಿವೆ. ಗೋಧಿ, ಈರುಳ್ಳಿ, ಕಲ್ಲಂಗಡಿ, ಕಪ್ಪು ಬೀನ್ಸ್ ಮತ್ತು ಗೋಡಂಬಿಯಲ್ಲೂ ಈ ಫ್ರಕ್ಟಾನ್ಸ್ ಇದೆ. ಇದು ಕೆಲವರಿಗೆ ಅಲರ್ಜಿಯುಂಟು ಮಾಡುತ್ತದೆ.

ಫ್ರಕ್ಟಾನ್ ಗ್ಲುಟನ್ ಅಲರ್ಜಿಯಂತೆಯೇ ಇರುತ್ತವೆ. ಈ ಕಾರಣದಿಂದಾಗಿ ವಾಯು, ಹೊಟ್ಟೆ ನೋವು, ಗ್ಯಾಸ್ ರಚನೆ ಮತ್ತು ಸೆಳೆತದ ಸಮಸ್ಯೆಗಳನ್ನು ಹೊಂದಿರಬಹುದು. ಬೆಳ್ಳುಳ್ಳಿ ತಿಂದ ತಕ್ಷಣ ನಿಮಗೆ ಈ ರೀತಿ ಅನಿಸಿದರೆ, ಜಾಗರೂಕರಾಗಿರಿ. ಆದಾಗ್ಯೂ, ನೀವು ಬೆಳ್ಳುಳ್ಳಿಯನ್ನು ಬೇಯಿಸಿ ತಿಂದರೆ, ಸ್ವಲ್ಪ ಮಟ್ಟಿಗೆ ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಬಹಿರಂಗವಾಗಿದೆ.

ಫ್ರಕ್ಟಾನ್ ಲಕ್ಷಣಗಳು ಗ್ಲುಟನ್ ಅಲರ್ಜಿಯಂತೆಯೇ ಇರುತ್ತವೆ. ಈ ಕಾರಣದಿಂದಾಗಿ ವಾಯು, ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ ಕಾಡುತ್ತದೆ. ಬೆಳ್ಳುಳ್ಳಿ ತಿಂದ ತಕ್ಷಣ ಇವುಗಳಲ್ಲಿ ಯಾವುದೇ ಸಮಸ್ಯೆ ಎದುರಾದ್ರೆ ಜಾಗರೂಕರಾಗಿರಿ.

ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್ ಉಂಟಾಗಬಹುದು. ಅನ್ನನಾಳದಲ್ಲಿ ಅತಿಯಾದ ಆಮ್ಲ ಹಿಮ್ಮುಖ ಹರಿವಿನಿಂದಾಗಿ ಇದು ಸಂಭವಿಸುತ್ತದೆ. ನೋವು, ತಲೆಸುತ್ತು, ಎದೆಯಲ್ಲಿ ಉರಿ ಮುಂತಾದ ಸಮಸ್ಯೆ ಕಾಡುತ್ತದೆ. ಹಾಗಾಗಿ ಅತಿಯಾಗಿ ಬೆಳ್ಳುಳ್ಳಿ ಸೇವನೆ ಮಾಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read