ಎನ್. ರಾಜಶೇಖರ್ ನಿರ್ದೇಶನದ ಸಿದ್ದಾರ್ಥ್ ಹಾಗೂ ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಅಭಿನಯಿಸಿರುವ ತಮಿಳಿನ ‘ಮಿಸ್ ಯು’ ಚಿತ್ರವನ್ನು ಇಂದು ಬಿಡುಗಡೆ ಮಾಡಲಾಗಿದೆ. ತನ್ನ ಟ್ರೈಲರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ, ಈ ಸಿನಿಮಾ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ.
ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು 7 ಮೈಲ್ಸ್ ಪರ್ ಸೆಕೆಂಡ್ ಬ್ಯಾನರ್ ನಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ನಿರ್ಮಾಣ ಮಾಡಿದ್ದು, ಘಿಬ್ರಾನ್ ವೈಭೋಡ ಸಂಗೀತ ಸಂಯೋಜನೆ ನೀಡಿದ್ದಾರೆ. ಸಿದ್ದಾರ್ಥ್ ಮತ್ತು ಆಶಿಕಾ ರಂಗನಾಥ್ ಸೇರಿದಂತೆ ಕರುಣಾಕರನ್, ಬಾಲಸರವಣನ್, “ಲೊಲ್ಲುಸಭಾ” ಮಾರನ್, ಸಾಸ್ತಿಕಾ ಬಣ್ಣ ಹಚ್ಚಿದ್ದಾರೆ. ದಿನೇಶ್ ಪೊನ್ರಾಜ್ ಸಂಕಲನ, ಆರ್. ಅಶೋಕ್ ಸಂಭಾಷಣೆ, ದಿನೇಶ್ ಕಾಸಿ ಸಾಹಸ ನಿರ್ದೇಶನ, ಕೆ.ಜಿ. ವೆಂಕಟೇಶ್ ಛಾಯಾಗ್ರಹಣ, ಹಾಗೂ ದಿನೇಶ್ ನೃತ್ಯ ನಿರ್ದೇಶನವಿದೆ.