BIG NEWS: ರಾಜಕೀಯ ವಿಲನ್ ಅಂತ ಇದ್ರೆ ಅದು ಹೆಚ್.ಡಿ.ಕುಮಾರಸ್ವಾಮಿ ಮಾತ್ರ; ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ರಾಜಕೀಯದಲ್ಲಿ ಯಾರಾದರೂ ವಿಲನ್ ಅಂತ ಇದ್ರೆ ಅದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ತಮ್ಮನ್ನು ಮಹಾಭಾರತದ ಎಲ್ಲಾ ಖಳನಾಯಕರಿಗೆ ಹೋಲಿಸಿದ್ದಾರೆ. ರಾಜಕೀಯ ಖಳನಾಯಕ ಅಂತಿದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದರು.

ಕ್ರಿಕೆಟ್ ನೋಡಲು ಹೋಗಿದ್ದರು ಎನ್ನುವುದನ್ನು ರಾಜಕೀಯವಾಗಿ ಟೀಕಿಸಿದ್ದಾರೆ. ಅವರು ಸರ್ಕಾರ ಬಿದ್ದುಹೋಗುವಾಗ ಅಮೆರಿಕದಲ್ಲಿ ಒಂದು ವಾರ ಕೂತಿದ್ದರು. ಒಂದು ವರ್ಷ 2 ತಿಂಗಳು ತಾಜ್ ವೆಸ್ಟ್ ಎಂಡ್ ನಲ್ಲಿ ಕಾಲಕಳೆಯುತ್ತಿದ್ದರು. ಇವರಿಂದ ನಾವು ಕಲಿಯಬೇಕಾ? ಎಂದು ಪ್ರಶ್ನಿಸಿದರು.

ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯನವರೇ ಬೀಳಿಸಿದ್ದು, ಅದನ್ನು ಒಪ್ಪಿಕೊಳ್ಳಲಿ ಎಂದು ಈಗ ಹೇಳುತ್ತಿದ್ದಾರೆ. ವಿಧಾನಮಂಡಲದ ವಿಶ್ವಾಸ ಮತಯಾಚನೆಯಾದ ಸಂದರ್ಭದಲ್ಲಿ ಉತ್ತರ ನೀಡಿದಾಗ ಈ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿಯವರು ಎಂದು ಕುಮಾರಸ್ವಾಮಿ ಹೇಳಿರುವುದು ವಿಧಾನಮಂಡಲದ ರೆಕಾರ್ಡ್ ನಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ. ಈಗ ಬೇರೆ ತರ ಹೇಳುತ್ತಿದ್ದಾರೆ. ಹಾಗಾದರೆ ವಿಧಾನಮಂಡಲವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದಾಯಿತು. ಶಾಸಕರು, ಸಚಿವರನ್ನು ಭೇಟಿ ಮಾಡದೆ ಹೋಟೆಲ್ ನಲ್ಲಿ ಕುಳಿತಿದ್ದರು ಇವರು ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರಿಗಿಂತಲೂ ಹೆಚ್.ಡಿ.ಕೆ ಹೆಚ್ಚು ರಾಜಕೀಯವಾಗಿ ಹತಾಶರಾಗಿದ್ದಾರೆ. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಗುಡುಗಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read