HDK ತಮ್ಮ ಪಕ್ಷವನ್ನು ಮರೆತುಬಿಟ್ಟು, BJP ವಕ್ತಾರರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ; ಸಿಎಂ ಸಿದ್ದರಾಮಯ್ಯ ಟಾಂಗ್

ಬೆಂಗಳೂರು: ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತೆ ಗುಡುಗಿದ್ದಾರೆ.

ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷವನ್ನು ಮರೆತುಬಿಟ್ಟಿದ್ದಾರೆ. ಬಿಜೆಪಿ ವಕ್ತಾರರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಅವರೊಂಥರಾ ಹಿಟ್ ಆಂಡ್ ರನ್ ಗಿರಾಕಿ. ಖಾಲಿ ಪೆನ್ ಡ್ರೈವ್ ಜೇಬಿಂದ ತೆಗೆಯೋದು ಒಳಗಿಟ್ಟುಕೊಂಡು ಹೋಗೋದು. ಇದೇ ಆಗೋಯ್ತು ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ದೇಶದ ಜನ‌ ನೆಮ್ಮದಿಯಾಗಿ, ಸಂತೋಷದಿಂದ ಇದ್ದರೆ ಬಿಜೆಪಿ ಗೆ ನೆಮ್ಮದಿ ಹಾಳಾಗುತ್ತದೆ. ಹೊಟ್ಟೆಕಿಚ್ಚು ಹೆಚ್ಚಾಗುತ್ತದೆ. ಈಗ ನಾವು ಬಿಜೆಪಿ ಕಾಲದ ಎಲ್ಲಾ ಹಗರಣಗಳು, ಭ್ರಷ್ಟಾಚಾರದ ತನಿಖೆ ಆರಂಭಿಸಿದ್ದೇವೆ. ಸದ್ಯದಲ್ಲೇ ಬಿಜೆಪಿ ಬೇಳೆಕಾಳು ಹೊರಗೆ ಬರುತ್ತದೆ ಎಂದರು.

2024 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸೋಲುತ್ತದೆ. ಪ್ರಧಾನಿ ಮೋದಿ ಪಾರ್ಲಿಮೆಂಟ್ ಗೆ ಸರಿಯಾಗಿ ಹೋಗಲ್ಲ, ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲ್ಲ. ಬರೀ ಮನ್ ಕಿ ಬಾತ್. ಆ ಬಾತ್ ನಲ್ಲೂ ದೇಶದ ಜನರ ಬಗ್ಗೆ ಕಾಳಜಿ ಇರೋದಿಲ್ಲ ಎಂದು ಟೀಕಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read