BIG NEWS: ಕೋರ್ಟ್ ಕೂಡ ತಪ್ಪು ಎಂದಿದೆ; ಸಿದ್ದರಾಮಯ್ಯನವರೇ ದೊಡ್ಡ ಮನಸ್ಸು ಮಾಡಿ ರಾಜೀನಾಮೆ ಕೊಡಿ ಎಂದ ನಟ ಜಗ್ಗೇಶ್

ಬೆಂಗಳೂರು: 40 ವರ್ಷಗಳ ರಾಜಕಾರಣದಲ್ಲಿ ಸಿದ್ದರಾಮಯ್ಯನವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಆದರೆ ಇಗ ಇಡೀ ಬಟ್ಟೆಯೇ ಕಪ್ಪು ಇಂಕ್ ನಲ್ಲಿ ತುಂಬಿ ಹೋಗಿದೆ. ದೊಡ್ಡ ಮನಸ್ಸು ಮಾಡಿ ಸಿದ್ದರಾಮಯ್ಯನವರೇ ರಾಜೀನಾಮೆ ನೀಡಿ ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್, ಸಿಎಂ ಸಿದ್ದರಾಮಯ್ಯ ಬಹಳ ಕ್ಲೀನ್ ನಾಯಕ ಅಂದುಕೊಂಡಿದ್ದೆ. ಈಗ ಮುಡಾ ಹಗರಣ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ಮಾಡಿದ್ದು ತಪ್ಪು ಎಂದು ಕೋರ್ಟ್ ಕೂಡ ಹೇಳಿದೆ. ಆದರೂ ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ದೊಡ್ಡ ಮನಸ್ಸು ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಹೇಳಿದ್ದಾರೆ.

ಮುಡಾ ಹಗರಣದ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಸಿದ್ದರಾಮಯ್ಯ ಘನವಾದ ಹೆಸರು ತಂದುಕೊಟ್ಟಿದ್ದಾರೆ. ರಾಜ್ಯದ ಮಾನ ಮರ್ಯಾದೆ ಈಗಾಗಲೇ ಹರಾಜಾಗಿದೆ ಕಿಡಿಕಾರಿದ ಜಗ್ಗೇಶ್, ರಾಜೀನಾಮೆ ಕೊಡಿ. ನಿರ್ದೋಷಿಯಾಗಿ ಹೊರಬನ್ನಿ ಎಂದು ಆಗ್ರಹಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read